ಬೆಂಗಳೂರು: ಮುಖ್ಯಮಂತ್ರಿಗಳು ದೇಶದ ಪ್ರಧಾನಮಂತ್ರಿಗಳ ವಿರುದ್ಧ ಹೇಡಿ ಎಂಬ ಪದ ಬಳಸಿದ್ದು ಭಾರತೀಯರಿಗೆ ಮಾಡಿದ ಅಪಮಾನ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಅವರು ತಿಳಿಸಿದ್ದಾರೆ.
ಬಿಜೆಪಿ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಅವರು ಇಂದು ಮಾಧ್ಯಮಗಳ ಜೊತೆ ಮಾತನಾಡಿದರು.
ಸಿದ್ದರಾಮಯ್ಯನವರು ಈ ಸಂಬಂಧ ದೇಶದ ಕ್ಷಮೆ ಕೇಳಬೇಕು. 146 ಕೋಟಿ ಜನರ ಕ್ಷಮೆ ಕೇಳಬೇಕೆಂದು ಆಗ್ರಹಿಸಿದರು. 2014ರಲ್ಲಿ ಮೋದಿಜೀ ಅವರನ್ನು ನರಹಂತಕ ಎಂದಿದ್ದರು. ನಿಮಗೆ ಚುನಾವಣೆಯಲ್ಲಿ ಜನರು ಛೀಮಾರಿ ಹಾಕಿದ್ದರು ಎಂದು ತಿಳಿಸಿದರು.
ಕೇವಲ ಕುರ್ಚಿಗಾಗಿ, ಸೋನಿಯಾ ಗಾಂಧಿ, ಅಪ್ರಬುದ್ಧ ರಾಜಕಾರಣಿ ರಾಹುಲ್ ಗಾಂಧಿ, ಪ್ರಿಯಾಂಕ ಗಾಂಧಿ ಅವರಿಗೆ ಶಿರಬಾಗಿ ನಮಸ್ಕರಿಸುತ್ತೀರಲ್ಲವೇ? ಇದು ಅನುಭವಿ ರಾಜಕಾರಣಿಯಾದ ನಿಮಗೆ ಶೋಭೆ ತರುತ್ತದೆಯೇ ಎಂದು ಕೇಳಿದರು.
ನರೇಂದ್ರ ಮೋದಿಜೀ ಅವರು ನಿಮಗೆ ಹೆದರಿ ಓಡಿ ಹೋಗಿಲ್ಲ. ಕಾಂಗ್ರೆಸ್ ಪಕ್ಷವು ಮಹಿಳಾ ಸದಸ್ಯರ ಮೂಲಕ ಪ್ರತಿಭಟನೆಗೆ ಮುಂದಾಗಿತ್ತು. ಲೋಕಸಭಾ ಸ್ಪೀಕರ್ ಅವರ ಸಲಹೆ ಮೇರೆಗೆ ಆ ಸಂದರ್ಭದಲ್ಲಿ ಪಾಲ್ಗೊಂಡಿಲ್ಲ. ಎಲುಬಿಲ್ಲದ ನಾಲಿಗೆ ಎಂಬ ಕಾರಣಕ್ಕೆ ಹೀಗೆ ಮಾತನಾಡುತ್ತೀರಾ ಎಂದು ಪ್ರಶ್ನಿಸಿದರು.
ಕುರ್ಚಿಯ ವಿಷಯ ಬಂದಾಗ ನೀವು ಈ ರೀತಿ ಮಾತನಾಡುತ್ತೀರಿ. ಸಿದ್ದರಾಮಯ್ಯನವರು ಅಧಿಕಾರಕ್ಕೆ ಬಂದು 3 ವರ್ಷಗಳಾಗಿವೆ. ನಿಮ್ಮ ಸಾಧನೆ ಏನು ಎಂದು ಕೇಳಿದರು. ಹೀಗೆ ಮಾತನಾಡಿ ದೇಶದಲ್ಲಿ ಕಾಂಗ್ರೆಸ್ ಪಕ್ಷದ ಅಡ್ರೆಸ್ ಇಲ್ಲದಂತಾಗಿದೆ ಎಂದು ತಿಳಿಸಿದರು.
ಚಾಯ್ವಾಲಾ ಇವತ್ತು ದೇಶದ ಪ್ರಧಾನಿ ಆಗಿಲ್ಲವೇ? ಎಂದ ಅವರು, ಈ ದೇಶದಲ್ಲಿ ಒಂದು ಕಾಲದಲ್ಲಿ ಇಂದಿರಾ ಎಂದರೆ ಇಂಡಿಯ ಎಂದಿತ್ತು. ಈಗ ಕಾಂಗ್ರೆÉ್ರಸ್ಸಿಗೆ ಅಡ್ರೆಸ್ ಇಲ್ಲವಾಗಿದೆ. ಕಾಂಗ್ರೆಸ್ಸಿಗೆ ಭವಿಷ್ಯ ಇಲ್ಲವಾಗಿದೆ ಎಂದು ಆರೋಪಿಸಿದರು. ನಿಮ್ಮ ಹಿರಿಯ ನಾಯಕರು ನಿಮ್ಮನ್ನು ಬಿಟ್ಟು ಹೋಗುತ್ತಿದ್ದಾರೆ ಎಂದು ಗಮನ ಸೆಳೆದರು.



