ಬೆಂಗಳೂರು:- ಸಿಎಂ ಬದಲಾವಣೆ ವಿಚಾರ. ಇದು ಸರ್ಕಾರ ದುರ್ಬಲಗೊಳಿಸಲು ವಿಪಕ್ಷಗಳ ತಂತ್ರ ಎಂದು ಸಚಿವ ಬೋಸರಾಜು ಹೇಳಿದ್ದಾರೆ. ಸಿಎಂ ಬದಲಾವಣೆ ವದಂತಿ ವಿಚಾರಕ್ಕೆ ಮಾತನಾಡಿ, ಸಿಎಂ ಬದಲಾವಣೆ ವಿಚಾರ ಸರ್ಕಾರ ಬಂದಾಗಿಂದ ನಡೆಯುತ್ತಿದೆ.
ಇದನ್ನು ಯಾರು ಮಾಡ್ತಿದ್ದಾರೆ? ಬಿಜೆಪಿಯವರು ಮಾಡ್ತಿದ್ದಾರೆ. ಸರ್ಕಾರವನ್ನ ವೀಕ್ ಮಾಡಬೇಕು, ಸಿಎಂ, ಡಿಸಿಎಂ ನಡುವೆ ಮನಸ್ತಾಪ ತಂದಿಡಬೇಕು ಎಂದು ಬಿಜೆಪಿಯವರು ಮಾಡ್ತಿದ್ದಾರೆ. ಬಿಜೆಪಿ, ಜೆಡಿಸ್ ಸೇರಿ ಸರ್ಕಾರ ದುರ್ಬಲಗೊಳಿಸಲು ಇದನ್ನು ಮಾಡ್ತಿದ್ದಾರೆ ಎಂದು ಅವರು ಹೇಳಿದ್ದಾರೆ.
ಬಿ.ವೈ.ವಿಜಯೇಂದ್ರರಾಜ್ಯಾಧ್ಯಕ್ಷರಾಗಿಂದ ಎಷ್ಟು ಬಾರಿ ಹೇಳಿದ್ದಾರೆ. ಸಿಎಂ ಬದಲಾವಣೆ ಆಗುತ್ತೆ ಅಂತ? ವಿಪಕ್ಷ ನಾಯಕ ಆರ್.ಅಶೋಕ್ ಎಷ್ಟು ಬಾರಿ ಮಾತಾಡಿದ್ದಾರೆ? ರಾಜ್ಯಮಟ್ಟದ ನಾಯಕರಾಗಿರೋರು ಜವಾಬ್ದಾರಿಯುತವಾಗಿ ಮಾತಾಡಬೇಕು. ಅದನ್ನು ಬಿಟ್ಟು ದಿನಾಂಕ ಹೇಳುತ್ತಿದ್ದಾರೆ. ಜನರ ಇದನ್ನು ಎಲ್ಲರೂ ಗಮನಿಸುತ್ತಾರೆ.
ನಾವು ಲೋಕಸಭೆ ಚುನಾವಣೆಯಲ್ಲಿ ಎಲ್ಲ ಸ್ಥಾನ ಗೆಲ್ಲಬೇಕು ಅಂದುಕೊಂಡಿದ್ದೆವು. ಈ ಬಾರಿ ಹೆಚ್ಚು ಸ್ಥಾನ ಗೆದ್ದಿದ್ದೇವೆ. ಬೊಮ್ಮಾಯಿ ಮಗ, ಕುಮಾರಸ್ವಾಮಿ ಮಗ ಉಪ ಚುನಾವಣೆಯಲ್ಲಿ ಸೋತಿದ್ದಾರೆ. ನಮಗೆ ಮೂರು ಸ್ಥಾನ ಉಪ ಚುನಾವಣೆ ಗೆಲುವಾಗಿದೆ. ಇದನ್ನ ಸಹಿಸಿಕೊಳ್ಳದೇ ಹತಾಶೆಯಿಂದ ಮಾತನಾಡುತ್ತಿದ್ದಾರೆ. ಅವರಲ್ಲಿ ಎಷ್ಟು ಬಣಗಳಿವೆ. ಅವರದ್ದೇ ಮೂರು ಬಾಗಿಲು ಆಗಿದೆ. ಅಧ್ಯಕ್ಷರ ಬದಲಾವಣೆ ವಿಚಾರ ತಾರಕಕ್ಕೇರಿದೆ ಎಂದಿದ್ದಾರೆ.