ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ವಿಕ್ಟೋರಿಯಾ ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿದ್ದಾರೆ. ಕಾರ್ಪೋರೇಷನ್ ಮಾರ್ಗವಾಗಿ ವಿಕ್ಟೋರಿಯಾ ಆಸ್ಪತ್ರೆಗೆ ತೆರಳಿದ ಸಿದ್ದರಾಮಯ್ಯ ಅವರು ಟ್ರಾಫಿಕ್ ನಡುವೆ ಸಂಚರಿಸಿ ವಿಕ್ಟೋರಿಯಾ ಆಸ್ಪತ್ರೆ ಗೆ ಭೇಟಿ ನೀಡಿದ್ದಾರೆ.
Advertisement
ಇದೇ ವೇಳೆ ಮಹಿಳೆಯೊಬ್ಬರು ಕಣ್ಣೀರಿಡುತ್ತಾ ಸಮಸ್ಯೆ ಹೇಳಿಕೊಂಡ್ರು. ವಿಕ್ಟೋರಿಯಾ ಆಸ್ಪತ್ರೆ ಮುಂದೆಯೇ ಸಿಎಂ ಜನರ ಕಷ್ಟ ಆಲಿಸಿದ್ರು. ಬಳಿಕ ಆಸ್ಪತ್ರೆಯ ಜನರಲ್ ವಾರ್ಡ್ಗೆ ಸಿದ್ದರಾಮಯ್ಯ ಭೇಟಿ ನೀಡಿದ್ರು. ರೋಗಿಗಳ ಬಳಿ ಕೂಡ ಮಾಹಿತಿ ಪಡೆದಿದ್ದಾರೆ.
ಜನರಲ್ ವಾರ್ಡ್ನಲ್ಲಿರುವ ರೋಗಿಗಳನ್ನ ಸಿಎಂ ಸಿದ್ದರಾಮಯ್ಯ ಮಾತಾಡಿಸಿದ್ದಾರೆ. ನಿಮಗೆ ಅಲ್ಲಿ ಏನು ತಿಂಡಿ, ಊಟ ಕೊಡ್ತಾರೆ? ಇಲ್ಲಿ ಚಿಕಿತ್ಸೆ ಸರಿಯಾಗಿ ಕೊಡ್ತಿದ್ದಾರಾ? ಎಂದು ರೋಗಿಗಳ ಯೋಗಕ್ಷೇಮ ವಿಚಾರಿಸಿದ್ದಾರೆ.