ಬೆಂಗಳೂರು: ಸೋಮವಾರ ಸಿಎಂ ಸಿದ್ದರಾಮಮಯ್ಯ ಆಯೋಜಿಸಿರುವ ಡಿನ್ನರ್ ಮೀಟಿಂಗ್ ವಿಚಾರದ ಬಗ್ಗೆ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಪ್ರತಿಕ್ರಿಯಿಸಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಸಿಎಂ ಹಿಂದೆಯೂ ಅನೇಕ ಬಾರಿ ಊಟಕ್ಕೆ ಕರೆದಿದ್ದಾರೆ. ತುಂಬಾ ದಿನ ಆಗಿತ್ತು. ಹೀಗಾಗಿ ಊಟಕ್ಕೆ ಕರೆದಿದ್ದಾರೆ.
ಡಿನ್ನರ್ ಕರೆಯೋದಕ್ಕೆ ಏನು ವಿಶೇಷತೆ ಇಲ್ಲ. ಊಟ ಹಾಕ್ತಾರೆ, ಊಟ ಮಾಡಿಕೊಂಡು ಬರುತ್ತೇವೆ. ಸಿಎಂ ಡಿನ್ನರ್ ಸಭೆ ಅಜೆಂಡಾ ಊಟ ಅಷ್ಟೇ. ಸಿಎಂ ಊಟಕ್ಕೆ ಕರೆದಿರೋದು ಒಂದು ಸಾಮಾನ್ಯ ಮೀಟಿಂಗ್ ಅಷ್ಟೆ. ಜಾಸ್ತಿ ದಿನ ಆಗಿದೆ ಅಂತ ಊಟಕ್ಕೆ ಕರೆದಿದ್ದಾರೆ ಎಂದು ಹೇಳಿದ್ದಾರೆ.
ಕಾಂಗ್ರೆಸ್‌ನಲ್ಲಿ ನವೆಂಬರ್ ಕ್ರಾಂತಿ ವಿಚಾರವಾಗಿ ಮಾತನಾಡಿದ ಅವರು, ಎಲ್ಲಿದೆ ನವೆಂಬರ್ ಕ್ರಾಂತಿ? ಯಾರು ಹೇಳಿದ್ರು ನವೆಂಬರ್ ಕ್ರಾಂತಿ ಅಂತ? ಯಾವ ಕ್ರಾಂತಿಯೂ ಇಲ್ಲ. ಸಂಪುಟ ಪುನಾರಚನೆ ಆಗೋದು ಎಲ್ಲಾ ಸಿಎಂ ಅವರನ್ನ ಕೇಳಬೇಕು. ಸಂಪುಟ ಪುನರಾಚನೆ ಇದ್ಯಾ, ಯಾರನ್ನಾದ್ರು ಹೊಸಬರನ್ನ ಮಂತ್ರಿಯಾಗಿ ತಗೋತೀರಾ ಅಂತ ಸಿಎಂ ಅವರನ್ನ ಕೇಳಿ ಎಂದಿದ್ದಾರೆ.