HomeBengaluru Cityಡಿಜಿಟಲ್ ಮಾಧ್ಯಮಕ್ಕೆ ಶಕ್ತಿ ತುಂಬಿದ ಸಿಎಂ; ಸಮೀವುಲ್ಲಾ

ಡಿಜಿಟಲ್ ಮಾಧ್ಯಮಕ್ಕೆ ಶಕ್ತಿ ತುಂಬಿದ ಸಿಎಂ; ಸಮೀವುಲ್ಲಾ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಬೆಂಗಳೂರು: ಡಿಜಿಟಲ್ ಮಾಧ್ಯಮಕ್ಕೆ ಜಾಹೀರಾತು ನೀಡಲು ರಾಜ್ಯದಲ್ಲಿ ಮೊದಲ ಬಾರಿಗೆ ಡಿಜಿಟಲ್ ಜಾಹೀರಾತು ನೀತಿ-2024 ಜಾರಿಗೊಳಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಶೀಘ್ರ ಬೆಂಗಳೂರಿನಲ್ಲಿ ವಿಶೇಷವಾದ ಡಿಜಿಟಲ್ ಮಾಧ್ಯಮ ಸಮೇಳನವನ್ನು ಹಮ್ಮಿಕೊಂಡು ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಡಿಜಿಟಲ್ ಮಾಧ್ಯಮ ಪತ್ರಕರ್ತರನ್ನು ಆಹ್ವಾನಿಸುವ ಚಿಂತನೆಯಿದೆ ಎಂದು ಕರ್ನಾಟಕ ಸ್ಟೇಟ್ ಡಿಜಿಟಲ್ ಮೀಡಿಯಾ ಫೋರಂ ರಾಜ್ಯಾಧ್ಯಕ್ಷರಾದ ಬಿ. ಸಮೀವುಲ್ಲಾ ಹೇಳಿದರು.

ಕೆಎಸ್‌ಡಿಎಂಎಫ್ ವತಿಯಿಂದ ನಗರದ ಪ್ರೆಸ್‌ಕ್ಲಬ್‌ನಲ್ಲಿ ಮಂಗಳವಾರ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ. ಪ್ರಭಾಕರ್ ಹಾಗೂ ವಾರ್ತಾ ಇಲಾಖೆಯ ಆಯುಕ್ತರಾದ ಹೇಮಂತ್ ನಿಂಬಾಳ್ಕರ್ ಅವರಿಗೆ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು.

ಡಿಜಿಟಲ್ ಮಾಧ್ಯಮ ನೀತಿಯಿಂದಾಗಿ ಬೇರೆ ಪತ್ರಿಕೆ, ಟಿವಿಯಂತೆ ಡಿಜಿಟಲ್ ಮಾಧ್ಯಮವು ಪತ್ರಿಕೋದ್ಯಮದ ಭಾಗವೆಂದು ಅಧಿಕೃತವಾಗಿದೆ. ದೇಶದಲ್ಲಿ ಡಿಜಿಟಲ್ ಪಾಲಿಸಿ ಕೆಲವು ರಾಜ್ಯಗಳಲ್ಲಿ ಇದೆಯಾದರೂ ನಮ್ಮ ರಾಜ್ಯದಲ್ಲಿ ಈ ನೀತಿ ಸಮಗ್ರವಾಗಿದ್ದು, ವೃತ್ತಿಪರವಾಗಿ ರಚನೆಯಾಗಿದೆ ಎಂದರು.

ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ. ಪ್ರಭಾಕರ್ ಅವರು ರಾಜ್ಯದಲ್ಲಿ ಡಿಜಿಟಲ್ ನೀತಿಯನ್ನು ಜಾರಿಗೆ ತರುವಲ್ಲಿ ಮಹತ್ವದ ಕಾರ್ಯನಿರ್ವಹಿಸಿದ್ದಾರೆ. ಡಿಜಿಟಲ್ ಮಾಧ್ಯಮವು ಪರ್ಯಾಯ ಮಾಧ್ಯಮವಾಗಿ ನೈಜ ಪತ್ರಿಕೋದ್ಯಮ, ನಿಷ್ಪಕ್ಷಪಾತವಾಗಿ ಪ್ರಾಮುಖ್ಯತೆ ಪಡೆದುಕೊಂಡಿದೆ. ಈ ನಿಟ್ಟಿನಲ್ಲಿ ಕರ್ನಾಟಕ ಸ್ಟೇಟ್ ಡಿಜಿಟಲ್ ಮೀಡಿಯಾ ಫೋರಂ ತನ್ನ ಸಂಘಟಿತ ಪ್ರಯತ್ನದಿಂದಾಗಿ ರಾಜ್ಯದಲ್ಲಿ ಡಿಜಿಟಲ್ ಮಾಧ್ಯಮ-2024 ನೀತಿಯನ್ನು ಜಾರಿಗೆ ತರಲಾಗಿದೆ. ಈ ನೀತಿಯಲ್ಲಿ ಪತ್ರಕರ್ತರಿಗೆ ಪೂರಕವಾಗಿ ಕೆಲವೊಂದು ಅಗತ್ಯ ಬದಲಾವಣೆ, ತಿದ್ದುಪಡಿಯಾಗಬೇಕಿದೆ ಎಂದು ಸಮೀವುಲ್ಲಾ ಹೇಳಿದರು.

ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ. ಪ್ರಭಾಕರ್ ಸನ್ಮಾನ ಸ್ವೀಕರಿಸಿ ಮಾತನಾಡಿ, ಸಂಸ್ಥೆಯ ಆಧ್ಯಕ್ಷರು ಹಾಗೂ ಹಿರಿಯ ಪತ್ರಕರ್ತರಾದ ಬಿ.ಸಮೀವುಲ್ಲಾ ಜೊತೆಗಿನ ವೃತ್ತಿ ಬಾಂಧವ್ಯವನ್ನು ಸ್ಮರಿಸಿದರು. ರಾಜ್ಯದಲ್ಲಿ ಡಿಜಿಟಲ್ ನೀತಿ ತರುವ ಬಗ್ಗೆ ಎರಡು ತಿಂಗಳ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಜೊತೆ ಚರ್ಚೆ ನಡೆಸಿದ್ದೆ. ಸಣ್ಣ ಪತ್ರಿಕೆಯಂತೆ ಡಿಜಿಟಲ್ ಮಾಧ್ಯಮವನ್ನು ಕೈಹಿಡಿಯುವ ಬಗ್ಗೆ ಮುಖ್ಯಮಂತ್ರಿ ಅವರ ಜೊತೆ ಮಾತನಾಡಿ ಡಿಜಿಟಲ್ ಮಾಧ್ಯಮ ಸಂಸ್ಥೆಗಳಿಗೂ ಜಾಹೀರಾತು ನೀಡಲು ಹಣಕಾಸು ವೆಚ್ಚ, ಡಿಜಿಟಲ್ ಮೀಡಿಯಾ ನೀತಿಯ ನೀಲನಕ್ಷೆ ಬಗ್ಗೆಯೂ ತಿಳಿಸಿದೆ. ಇದಕ್ಕೆ ಸಿಎಂ ಕೂಡ ಸಹಮತ ವ್ಯಕ್ತಪಡಿಸಿದರು. ಹೀಗಾಗಿ ಡಿಜಿಟಲ್ ಜಾಹೀರಾತು ನೀತಿ ತರಲು ಸಾಧ್ಯವಾಯಿತು ಎಂದರು.

ಪ್ರೆಸ್ ಕ್ಲಬ್ ಅಧ್ಯಕ್ಷರಾದ ಶ್ರೀಧರ್ ಮಾತನಾಡಿ, ಡಿಜಿಟಲ್ ಮೀಡಿಯಾ ಫೋರಂ ಈಗಿನ ಡಿಜಿಟಲ್ ಮಾಧ್ಯಮಕ್ಕೆ ಅತ್ಯಗತ್ಯವಾಗಿತ್ತು. ವೃತ್ತಿಪರ ಡಿಜಿಟಲ್ ಪತ್ರಕರ್ತರಿಗೆ ಈ ಕೆಎಸ್‌ಡಿಎಂಎಫ್ ಫೋರಂ ಹೆಚ್ಚಿನ ಅನುಕೂಲವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಕೆಎಸ್ ಡಿಎಂಎಫ್ ಉಪಾಧ್ಯಕ್ಷ ಸುನೀಲ್ ಶಿರಸಿಂಗಿ, ಕಾರ್ಯದರ್ಶಿ ಕೆ.ಎಂ. ಶಿವಕುಮಾರ್, ಖಜಾಂಚಿ ಸನತ್ ಕುಮಾರ್ ರೈ, ಜಂಟಿ ಕಾರ್ಯದರ್ಶಿಗಳಾದ ಮಾಲತೇಶ್ ಅರಸ್, ರಜನಿ ಹಾಗೂ ಕೆಎಸ್ ಡಿಎಂಎಫ್ ಸದಸ್ಯರು, ಹಿರಿಯ ಪತ್ರಕರ್ತರಾದ ಹಮೀದ್ ಪಾಳ್ಯ, ಪ್ರತಿಧ್ವನಿ ಶಿವಕುಮಾರ್, ವಿಜಯ್ ಭರಮಸಾಗರ, ಮಂಜು ಬಾಣಗೆರೆ, ರವೀಂದ್ರ ಜೋಶಿ, ಮುತ್ತುರಾಜ್, ರಮೇಶ್, ದರ್ಶನ್ ಮುಂತಾದವರು ಭಾಗವಹಿಸಿದ್ದರು.

ಇಲಾಖೆಯಿಂದ ಐಡಿ ಕಾರ್ಡ್

ಡಿಜಿಟಲ್ ಮಾಧ್ಯಮದವರಿಗೂ ವಾರ್ತಾ ಇಲಾಖೆಯಿಂದ ಮಾಧ್ಯಮ ಮಾನ್ಯತೆಯ ಕಾರ್ಡ್ ಅಥವಾ ಐಡಿ ಕಾರ್ಡ್ ನೀಡಲು ಇಲಾಖೆಯ ಆಯುಕ್ತರಾದ ಹೇಮಂತ್ ನಿಂಬಾಳ್ಕರ್ ಅವರ ಜೊತೆ ಮಾತನಾಡುತ್ತೇನೆ ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ. ಪ್ರಭಾಕರ್ ಭರವಸೆ ನೀಡಿದರು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!