ಬೆಂಗಳೂರು: ಸಂವಿಧಾನದ ಮೇಲೆ ಗೌರವ ಇದ್ದರೆ ಸಿಎಂ ರಾಜೀನಾಮೆ ಕೊಡುತ್ತಿದ್ದರು ಎಂದು ವಿಧಾನ್ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಹೇಳಿದರು. ನಗರದಲ್ಲಿ ಮಾತನಾಡಿದ ಅವರು, ಈ ಪ್ರಕರಣದಲ್ಲಿ ಇಡಿ ಯಾಕೆ ಪ್ರವೇಶ ಆಯ್ತು ಎಂದು ಗೊತ್ತಾಗಿದೆ. ಈಗಾಗಲೇ ಸಿದ್ದರಾಮಯ್ಯ ವಾಲ್ಮೀಕಿ ನಿಗಮದಲ್ಲಿ ಅಕ್ರಮ ಆಗಿದೆ ಎಂದು ಒಪ್ಪಿದ್ದಾರೆ. ಆದರೆ ಇದರಿಂದ ಕ್ಲೀನ್‌ಚಿಟ್ ಕೊಡಿಸಲು ಪ್ರಯತ್ನ ನಡೆಸಲಾಗುತ್ತಿದೆ.
ಬಳ್ಳಾರಿ ಲೋಕಸಭಾ ಚುನಾವಣೆಗೆ ವಾಲ್ಮೀಕಿ ನಿಗಮದ 20 ಕೋಟಿ ರೂ. ಕೊಡಲಾಗಿತ್ತು. ಜೊತೆಗೆ ನಾಗೇಂದ್ರ ತಮ್ಮ ವೈಯಕ್ತಿಕ ಖರ್ಚುಗಳಿಗೂ ನಿಗಮದ ಹಣ ಬಳಸಿದ್ದ ಬಗ್ಗೆ ಉಲ್ಲೇಖ ಮಾಡಿದ್ದಾರೆ. ಈಗ ಸಿಎಂ ಏನು ಮಾಡುತ್ತಾರೆ? ಸಿಎಂಗೆ ಕಿಂಚಿತ್ ಆತ್ಮ ಗೌರವ, ಸಂವಿಧಾನದ ಮೇಲೆ ಗೌರವ ಇದ್ದರೆ ರಾಜೀನಾಮೆ ಕೊಡುತ್ತಿದ್ದರು ಎಂದು ಕಿಡಿಕಾರಿದರು.



