ಬೆಂಗಳೂರು:- ಸಿಎಂ ಸಿದ್ದರಾಮಯ್ಯ ಕೊಟ್ಟ ಮಾತಿಗೆ ಎಂದಿಗೂ ತಪ್ಪಲ್ಲ ಎಂದು ಸಚಿವ ಮಂಕಾಳ ವೈದ್ಯ ಹೇಳಿದ್ದಾರೆ.
Advertisement
ಪವರ್ ಶೇರಿಂಗ್ ವಿಚಾರವಾಗಿ ಮಾತನಾಡಿದ ಅವರು, ಸಿಎಂ ಮಾತು ಕೊಟ್ಟಿದ್ರೆ, ಮಾತು ಉಳಿಸಿಕೊಳ್ಳುತ್ತಾರೆ. ಸಿದ್ದರಾಮಯ್ಯ ಕೊಟ್ಟ ಮಾತು ತಪ್ಪಲ್ಲ. ಮಾತು ಆಗಿದ್ರೆ ಖಂಡಿತ ಬಿಟ್ಟು ಕೊಡುತ್ತಾರೆ. ಮಾತು ಆಗಿದ್ರೆ ಡಿಕೆ ಶಿವಕುಮಾರ್ ಸಿಎಂ ಆಗುತ್ತಾರೆ. ನಮ್ಮಲ್ಲಿ ಗೊಂದಲ ಆಗಬಾರದು. ಹೈಕಮಾಂಡ್ ತೀರ್ಮಾನಕ್ಕೆ ನಾವು ಬದ್ಧರಾಗಿದ್ದೇವೆ. ಸರಿಯಾದ ಸಮಯಕ್ಕೆ ಹೈಕಮಾಂಡ್ ನಿರ್ಧಾರ, ನಿರ್ಣಯ ಮಾಡುತ್ತೆ ಎಂದರು.
ಸಿಎಂ, ಡಿಸಿಎಂ ನಿವಾಸಕ್ಕೆ ಕಾರ್ಯಕ್ರಮಕ್ಕೆ ಆಹ್ವಾನ ಮಾಡಲು ಹೋಗಿದ್ದೆ ಅಷ್ಟೇ. ಯಾವ ಕ್ರಾಂತಿಯೂ ಆಗೋದಿಲ್ಲ.ನಾವು ಪಕ್ಷಕ್ಕೆ, ಹೈಕಮಾಂಡ್‌ಗೆ ಬೆಂಬಲ ಕೊಡುತ್ತೇವೆ. ನನ್ನನ್ನು ಸಚಿವರನ್ನಾಗಿ ಮಾಡಿದ್ದು ಹೈಕಮಾಂಡ್. ಸರಿಯಾದ ಸಮಯಕ್ಕೆ ಸರಿಯಾದ ತೀರ್ಮಾನ ತೆಗದುಕೊಳ್ಳುತ್ತಾರೆ ಎಂದು ಹೇಳಿದರು.


