ಬೆಂಗಳೂರು:- ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು 16ನೇ ಬಜೆಟ್ ಮಂಡನೆ ಮಾಡಲಿದ್ದಾರೆ.
ಬೆಳಗ್ಗೆ 9:30 ಕ್ಕೆ ತಮ್ಮ ನಿವಾಸದಿಂದ ಬಜೆಟ್ ಮಂಡನೆಗೆ ಸಿಎಂ ಹೊರಡಲಿದ್ದಾರೆ. 9:45 ಕ್ಕೆ ವಿಧಾನಸೌಧದ ತಮ್ಮ ಕಚೇರಿಗೆ ಆಗಮಿಸಲಿದ್ದಾರೆ. 10 ಗಂಟೆಗೆ ಸಚಿವ ಸಂಪುಟ ಸಭೆ ನಡೆಯಲಿದೆ. ಸಚಿವ ಸಂಪುಟ ಸಭೆಯಲ್ಲಿ ಬಜೆಟ್ಗೆ ಅನುಮೋದನೆ ಪಡೆದು 10:10 ನಿಮಿಷಕ್ಕೆ ಸರಿಯಾಗಿ ಸದನಕ್ಕೆ ಸಿದ್ದರಾಮಯ್ಯ ಆಗಮಿಸಲಿದ್ದಾರೆ. ಬಜೆಟ್ ಗಾತ್ರ 4 ಲಕ್ಷ ಕೋಟಿ ದಾಟುವ ನಿರೀಕ್ಷೆ ಇದೆ.
ಸಿದ್ದರಾಮಯ್ಯ ಅವರು, ಆರಂಭದಲ್ಲಿ ನಿಂತುಕೊಂಡೆ ಬಜೆಟ್ ಮಂಡಿಸುತ್ತಾರೆ. ಮಂಡಿನೋವಿನ ಸಮಸ್ಯೆ ಇರುವುದರಿಂದ ಆನಂತರ ಕುಳಿತುಕೊಂಡು ಬಜೆಟ್ ಓದಲಿದ್ದಾರೆ. ಅಂದಾಜು 3 ಗಂಟೆ 30 ನಿಮಿಷಗಳ ಕಾಲ ಬಜೆಟ್ ಮಂಡನೆ ಮಾಡುವ ಸಾಧ್ಯತೆ ಇದೆ.
ರಾಜ್ಯದ ಜನತೆಗೆ ಸಿದ್ದರಾಮಯ್ಯರ ಬಜೆಟ್ ಮೇಲೆ ನಿರೀಕ್ಷೆಗಳು ಗರಿಗೆದರಿವೆ. ಬಜೆಟ್ ಗಾತ್ರ 4 ಲಕ್ಷ ಕೋಟಿ ದಾಟುವ ಸಾಧ್ಯತೆ ಇದೆ. ಕಳೆದ ಬಾರಿ 3.71 ಲಕ್ಷ ಕೋಟಿ ಬಜೆಟ್ ಗಾತ್ರ ಇತ್ತು. ಈ ಬಾರಿಯೂ ಕೊರತೆ ಬಜೆಟ್ ಮಂಡನೆ ಸಾಧ್ಯತೆ ಇದೆ. ಅಂದಾಜು 30 ಸಾವಿರ ಕೋಟಿ ರೂ. ಕೊರತೆ ಬಜೆಟ್ ಆಗಬಹುದು. ಈ ಬಾರಿ ಸಾಲದ ಪ್ರಮಾಣವೂ ಹೆಚ್ಚಳ ಸಾಧ್ಯತೆ ಇದೆ. ಅಂದಾಜು 1.25 ಲಕ್ಷ ಕೋಟಿ ಸಾಲ ಪ್ರಸ್ತಾಪವಾಗಬಹುದು. ಕಾಲು ನೋವಿನಿಂದ ಸಿಎಂ ಸಿದ್ದರಾಮಯ್ಯ ಕುಳಿತುಕೊಂಡೇ ಬಜೆಟ್ ಮಂಡನೆ ಮಾಡಲಿದ್ದಾರೆ.