ಬೆಳಗಾವಿ: ಮುಖ್ಯಮಂತ್ರಿ ಸಿದ್ದರಾಮಯ್ಯರ ಹೆಲಿಕಾಪ್ಟರ್ ಹಾಗೂ ವಿಮಾನ ಪಯಣಗಳಿಗೆ ಕಳೆದ ಎರಡೂವರೆ ವರ್ಷಗಳಲ್ಲಿ ಒಟ್ಟು 47.38 ಕೋಟಿ ರೂ. ವೆಚ್ಚವಾಗಿದೆ.
ವಿಧಾನ ಪರಿಷತ್ನಲ್ಲಿ ಬಿಜೆಪಿ ಎಂಎಲ್ಸಿ ರವಿಕುಮಾರ್ ಕೇಳಿದ ಪ್ರಶ್ನೆಗೆ ಸರ್ಕಾರ ಈ ಮಾಹಿತಿ ನೀಡಿದೆ. 2023ರಿಂದ 2025ರ ನವೆಂಬರ್ ತನಕ ಸಿಎಂ ಅವರು ರಾಜ್ಯದ ವಿವಿಧ ಜಿಲ್ಲೆಗಳು, ದೆಹಲಿ, ಹೈದರಾಬಾದ್, ಚೆನ್ನೈ ಸೇರಿದಂತೆ ಹಲವೆಡೆ ಅಧಿಕೃತ ಕಾರ್ಯಕ್ರಮಗಳಿಗೆ ಪ್ರಯಾಣಿಸಲು ಹೆಲಿಕಾಪ್ಟರ್ ಮತ್ತು ಚಾರ್ಟರ್ಡ್ ವಿಮಾನಗಳನ್ನು ಬಳಸಿದ್ದಾರೆ. ಮೈಸೂರಿಗೆ ಹೋಗಿ ಬರಲು ಮಾತ್ರವೇ ಈ ಅವಧಿಯಲ್ಲಿ 5 ಕೋಟಿಗೂ ಹೆಚ್ಚು ಹಣ ಖರ್ಚಾಗಿರುವುದಾಗಿ ವಿವರಿಸಲಾಗಿದೆ.
ವಾರ್ಷಿಕ ವೆಚ್ಚದ ವಿವರ:-
2023–24: ₹12.23 ಕೋಟಿ.
2024–25: ₹21.11 ಕೋಟಿ.
2025 (ಏಪ್ರಿಲ್–ನವೆಂಬರ್): ₹14.03 ಕೋಟಿ
ಒಟ್ಟು ವೆಚ್ಚ: ₹47.38 ಕೋಟಿ.
ಸಿಎಂ ವಾಯುಯಾನಕ್ಕೆ ಖರ್ಚಾದ ಮೊತ್ತ ಬೆಳಕಿಗೆ ಬಿದ್ದಿರುವ ಹಿನ್ನೆಲೆಯಲ್ಲಿ ರಾಜಕೀಯ ವಲಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ.



