ಸಿಎಂ ಔತಣಕೂಟ ಆಹ್ವಾನ ವಿಚಾರ: ಚೆಲುವರಾಯಸ್ವಾಮಿ ಹೇಳಿದ್ದೇನು..?

0
Spread the love

ಬೆಂಗಳೂರು: – ಸಿಎಂ ಔತಣಕೂಟ ಆಹ್ವಾನ ವಿಚಾರಕ್ಕೆ ಸಂಬಂಧಿಸಿದಂತೆ ಸಚಿವ ಚೆಲುವರಾಯಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ. ಈ ಸಂಬಂಧ ನಗರದಲ್ಲಿ ಮಾತನಾಡಿದ ಅವರು, ನನಗೆ ಏನು ವಿಷಯ ಅಂತ ಗೊತ್ತಿಲ್ಲ. ಇದಕ್ಕೂ ಮುನ್ನ ಎರಡ್ಮೂರು ಸಭೆ ಬಾರಿ ಕರೆದಿದ್ದಾರೆ.

Advertisement

ಈ ವೇಳೆ ಸರ್ಕಾರದ ಕಾರ್ಯಕ್ರಮ, ಅಭಿವೃದ್ಧಿ, ಪಕ್ಷದ ಸಂಘಟನೆ, ಸ್ಥಳೀಯ ಚುನಾವಣೆ ಬಗ್ಗೆ ಚರ್ಚೆ ಮಾಡಿದ್ದರು. ಈಗಲೂ ಅದೇ ಇರಬಹುದು. ಆದ್ರೆ ಸಂಪುಟ ಪುನರ್‌ಚನೆ ಬೇರೆ. ಇದಕ್ಕೂ ಅದಕ್ಕೂ ಸಂಬಂಧ ಇಲ್ಲ ಎಂದಿದ್ದಾರೆ.

ಸಂಪುಟ ಪುನರ್‌ಚನೆ ಎಲ್ಲವೂ ಪಕ್ಷ ಮತ್ತು ಸಿಎಂ ಅವರಿಗೆ ಬಿಟ್ಟಿದ್ದು. ಅವರಿಗೆ ಸಂಬಂಧಿಸಿದ್ದು. ಖಾತೆ ಬದಲಾವಣೆ, ಸಂಪುಟ ಪುನಾರಚನೆ, ಹೊಸಬರನ್ನ ತೆಗೆದುಕೊಳ್ಳೋದು ಸಿಎಂ ಅವರಿಗೆ ಬಿಟ್ಟಿದ್ದು. ಎರಡೂವರೆ ವರ್ಷ ಆದ್ಮೇಲೆ ಬೇರೆಯವರಿಗೆ ಅವಕಾಶ ನೀಡಬೇಕು ಅಂತ ಹೇಳ್ತಾರೆ. ಸಚಿವರ ಮೌಲ್ಯಮಾಪನ ಅಂತ ಏನಿಲ್ಲ. ಎಲ್ಲರಿಗೂ ಅವಕಾಶ ನೀಡಬೇಕಾಗುತ್ತದೆ. ಎಲ್ಲರಿಗೂ ಸಚಿವರು ಆಗೋ ಆಸೆ ಇರುತ್ತದೆ ಹೈಕಮಾಂಡ್‌ ಹಾಗೂ ಸಿಎಂ ಈ ಬಗ್ಗೆ ನಿರ್ಧಾರ ಮಾಡುತ್ತಾರೆ ಎಂದರು.


Spread the love

LEAVE A REPLY

Please enter your comment!
Please enter your name here