ಉಡುಪಿ:- ಸಿಎಂ ಕಚೇರಿ ಕ್ರೈಸ್ತ ಮಿಷನರಿಗಳ ನೆರಳಲ್ಲಿ ಕೆಲಸ ಮಾಡುತ್ತಿದೆ ಎಂದು ಸಚಿವ ಸುನಿಲ್ ಕುಮಾರ್ ಆರೋಪ ಮಾಡಿದ್ದಾರೆ.
ಈ ಸಂಬಂಧ ನಗರದಲ್ಲಿ ಮಾತನಾಡಿದ ಅವರು, ಜಾತಿಗಣತಿ ವಿಚಾರದಲ್ಲಿ ಸಿಎಂ ಸಿದ್ದರಾಮಯ್ಯ ಕರ್ನಾಟಕದ ಪೋಪ್ ಆಗಲು ಹೊರಟಿದ್ದಾರೆ. ಮುಲ್ಲಾ ಆಗಿದ್ದ ಸಿದ್ದರಾಮಯ್ಯ ಈಗ ಫಾದರ್ ಆಗಲು ಹೊರಟಿದ್ದಾರೆ. ಸಿಎಂ ಕಚೇರಿ ಕ್ರೈಸ್ತ ಮಿಷನರಿಗಳ ನೆರಳಲ್ಲಿ ಕೆಲಸ ಮಾಡುತ್ತಿದೆ. ಕ್ರಿಶ್ಚಿಯನ್ ಜೊತೆ ಇರುವ 47 ಉಪಜಾತಿ ಪಟ್ಟಿ ಕೈಬಿಡದಿದ್ದರೆ ಆಯೋಗಕ್ಕೆ ಮುತ್ತಿಗೆ ಹಾಕುವ ದಿನ ಬರಬಹುದು ಎಂದು ಎಚ್ಚರಿಸಿದ್ದಾರೆ.
ಸಿಎಂ ಕ್ರಿಶ್ಚಿಯನ್ ಗರ್ಭಗುಡಿಯಲ್ಲಿ ರಾಜಕೀಯ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಕರ್ನಾಟಕದ ಪೋಪ್ ಆಗಲು ಹೊರಟಿದ್ದಾರೆ. ಸರ್ಕಾರ ಮುಲ್ಲಾ ಪಾದ್ರಿಗಳ ಕೈಗೊಂಬೆ ಆಗಲು ಹೊರಟಿದೆ. ಸಿಎಂ ಫಾದರ್ ಸಿದ್ದರಾಮಯ್ಯ ಆಗಲು ಹೊರಟಿದ್ದಾರೆ. ಫಾದರ್ ಸಿದ್ದರಾಮಯ್ಯ ಹಿಂದೆ ಯಾರದೋ ಓಲೈಕೆ ಅಡಗಿದೆ. ರಾಜ್ಯದ ಹಿತ ಅಡಗಿಲ್ಲ, ಸಾಮಾಜಿಕ ನ್ಯಾಯದ ಆಶಯ ಶಿಲುಬೆಗೆ ಏರಿಸಬೇಡಿ. ದಲಿತ ಒಬಿಸಿಯನ್ನು ಮತಾಂತರಕ್ಕೆ ಕೈಹಾಕಿರೋದು ದುರಂತ. ಫಾದರ್ ಸಿದ್ದರಾಮಯ್ಯ ಕುಲ ಶಾಸ್ತ್ರೀಯ ಅಧ್ಯಯನ ಮಾಡಬೇಕು. ಫಾದರ್ ಸಿದ್ದರಾಮಯ್ಯ ಸಂವಿಧಾನ ಹೇಗೆ ಅರ್ಥ ಮಾಡಿಕೊಂಡಿದ್ದಾರೆ ಗೊತ್ತಿಲ್ಲ. ಸಮಾಜ ಸಮಾಜ ಒಡೆದು ಕರ್ನಾಟಕದ ಪೋಪ್ ಆಗಲು ಹೊರಟರೆ ಎಂದು ಪ್ರಶ್ನಿಸಿದ್ದಾರೆ.
ಸಿಎಂ ಕ್ರಿಶ್ಚಿಯನ್ ಗರ್ಭಗುಡಿಯಲ್ಲಿ ರಾಜಕೀಯ ಮಾಡುತ್ತಿದ್ದಾರೆ. ನ್ಯಾಯದ ಆಶಯವನ್ನು ಶಿಲುಬೆಗೇರಿಸಲಾಗಿದೆ ಎಂದು ಟೀಕಿಸಿದ್ದಾರೆ.