ಮೈಸೂರು: ಯಾವುದೇ ವರ್ಗಾವಣೆ ಆಗಬೇಕಾದ್ರೂ ಸಿಎಂ ಪುತ್ರನಿಗೆ ತೆರಿಗೆ ಕಟ್ಟಬೇಕು ಎಂದು ಡಾ. ಯತೀಂದ್ರ ವಿರುದ್ಧ ಮಾಜಿ ಸಂಸದ ಪ್ರತಾಪ್ ಸಿಂಹ ಆರೋಪ ಮಾಡಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಅವರು, ಮೈಸೂರು ಪೊಲೀಸರಿಗೆ ವರ್ಗಾವಣೆ ಕಾಟ, ಜಾತಿ ಕಾಟ ಜಾಸ್ತಿ ಆಗಿದೆ. ಯಾವುದೇ ವರ್ಗಾವಣೆ ಆಗ ಬೇಕಾದರೆ ಸಿಎಂ ಪುತ್ರನಿಗೆ ತೆರಿಗೆ ಕಟ್ಟಬೇಕು.
ಕಲೆಕ್ಷನ್ ವಿಚಾರದಲ್ಲಿ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಪೈಪೋಟಿಗೆ ಇಳಿದಿದ್ದಾರೆ. ಯಾರು ಜಾಸ್ತಿ ಕಲೆಕ್ಷನ್ ಮಾಡಿ ರಾಹುಲ್ ಗಾಂಧಿಗೆ ಕೊಡ್ತಿವೋ ಅಂತಾ ಪೈಪೋಟಿ ನಡೆಯುತ್ತಿದೆ. ಸಿದ್ದರಾಮಯ್ಯ ಹೃದಯ ಕಲ್ಲಾಗಿದೆ. ಯಾವ ಜಾತಿಯವನು ಆರೋಪಿ ಎಂದು ನೋಡಿ ನಂತರ ಅವನನ್ನು ಹಿಡಿಯಬೇಕಾದ ಸ್ಥಿತಿ ಮೈಸೂರು ಪೊಲೀಸರಿಗೆ ಬಂದಿದೆ ಎಂದು ವ್ಯಂಗ್ಯವಾಡಿದ್ದಾರೆ.
ಮೈಸೂರಿನಲ್ಲಿ ಇಸ್ಪೀಟ್ ದಂಧೆ ನಡೆಯುತ್ತಿದೆ. ಅದರ ಮೇಲೂ ಪೊಲೀಸರು ರೈಡ್ ಮಾಡಲು ಹೆದರುತ್ತಿದ್ದಾರೆ. ಯಾವ ಸಚಿವನ, ಶಾಸಕನ ಫೋನ್ ಬರುತ್ತದೆ ಅಂತಾ ಪೊಲೀಸರಿಗೆ ಭಯ ಆಗಿದೆ. ಗೃಹ ಸಚಿವರು ಬಿಡಿ. ಸಿದ್ದರಾಮಯ್ಯ ಕುರ್ಚಿ ಖಾಲಿ ಆದರೆ, ತನಗೆ ಸಿಗುತ್ತೆ ಅಂತಾ ಇಲಾಖೆಯನ್ನೇ ಮರೆತಿದ್ದಾರೆ. ಸಿಎಂ ಅವರೇ ನಿಮ್ಮ ಮಗನಿಗೆ ಹೇಳಿ ವರ್ಗಾವಣೆ ದಂಧೆ ನಿಲ್ಲಿಸಲು. ಶಾಸಕರಿಗೆ ವಸೂಲಿ ನಿಲ್ಲಿಸಲು ಹೇಳಿ. ಇಲ್ಲ ನೀವೇ ವಸೂಲಿ ಮಾಡಲು ಬಿಟ್ಟಿದ್ದಾರಾ ಎಂದು ಪ್ರಶ್ನಿಸಿದ್ದಾರೆ.