ಹೈದರಾಬಾದ್:- ತೆಲಂಗಾಣದ ಜಗಿತ್ಯಾದ ಜಿಲ್ಲಾ ಕೇಂದ್ರದ ಟಿಫಿನ್ ಸೆಂಟರ್ನಲ್ಲಿ ಇಡ್ಲಿಯಲ್ಲಿ ಜಿರಳೆ ಕಾಣಿಸಿಕೊಂಡು ಸಂಚಲನ ಮೂಡಿಸಿದೆ.
Advertisement
ಗ್ರಾಹಕ ಇಡ್ಲಿಯನ್ನು ತಿನ್ನುವ ಮೊದಲೇ ಜಿರಳೆಯನ್ನು ಕಂಡು ಗಲಾಟೆ ಮಾಡಿದ್ದಾನೆ. ಟಿಫಿನ್ ಸೆಂಟರ್ ಮಾಲೀಕರು ಆ ಇಡ್ಲಿಯನ್ನು ಕಸಕ್ಕೆ ಎಸೆದಿದ್ದಾರೆ.
ಈ ವೇಳೆ ಹೋಟೆಲ್ ಸಿಬ್ಬಂದಿ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ಇನ್ನೂ ಕೆಲವು ಹೋಟೆಲ್‌ಗಳು ಗ್ರಾಹಕರಿಗೆ ನೀಡಲಾಗುವ ಆಹಾರದ ಗುಣಮಟ್ಟದ ಬಗ್ಗೆ ಎಚ್ಚರಿಕೆ ವಹಿಸುತ್ತಿಲ್ಲ ಎಂಬ ಆತಂಕ ಎದುರಾಗಿದೆ.
ಕೆಲವು ಹೋಟೆಲ್ ಗಳು ಕ್ರಿಮಿಕೀಟಗಳ ಸಮೇತ ಊಟ ಬಡಿಸಿ ಜನರಲ್ಲಿ ಭಯ ಹುಟ್ಟಿಸುತ್ತಿವೆ.