ಮನೆಯಲ್ಲಿ ಜಿರಳೆ ಕಾಟ ಹೆಚ್ಚಾಗಿದ್ಯಾ? ಹಾಗಾದ್ರೆ ಇಲ್ಲಿದೆ ಸುಲಭ ಟಿಪ್ಸ್!

0
Spread the love

ಮನೆಯಲ್ಲಿ ಜಿರಳೆ ಅತ್ತಿಂದಿತ್ತ ಓಡಾಡುತ್ತಿದ್ದರೆ ನಿಮಗೆ ಒಂಥರಾ ಅನಿಸೋದಿಲ್ಲವೇ? . ಅದರಲ್ಲೂ ನೀವು ನಿಮ್ಮ ಮನೆಯನ್ನು ಅಡುಗೆ ಮನೆಯನ್ನು ಎಷ್ಟೇ ಶುಚಿಯಾಗಿಟ್ಟರೂ ಜಿರಳೆಗಳ ಕಾಟ ತಪ್ಪಿದ್ದಲ್ಲ. ಈ ಜಿರಳೆಗಳ ಕಾಟದಿಂದ ಮುಕ್ತಿ ಪಡೆಯಲು ಹಲವಾರು ಸ್ಪ್ರೇಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಆದರೆ ಅದರ ಘಮ ಆರೋಗ್ಯಕ್ಕೆ ಒಳ್ಳೆಯದಲ್ಲ.

Advertisement

ಅದಕ್ಕಾಗಿ ನಾವಿಂದು ಮನೆಯಿಂದ ಜಿರಳೆಗಳನ್ನು ಓಡಿಸಬಹುದಾದ ಸರಳ ಮಾರ್ಗ ಹೇಳುತ್ತಿದ್ದೇವೆ ನೋಡಿ. ಅಡುಗೆ ಮನೆಯಲ್ಲಿ ಹೆಚ್ಚು ಜಿರಳೆಗಳು ಓಡಾಡುತ್ತಿದ್ದರೆ, ಕಿತ್ತಳೆ ಸಿಪ್ಪೆಯನ್ನು ಬಳಸಿ. ಏಕೆಂದರೆ ಇದರಲ್ಲಿ ಲಿಮೋನೆನ್ ಎಂಬ ಸಂಯುಕ್ತ ಇರುತ್ತದೆ. ಈ ಸಂಯುಕ್ತದಿಂದ ಜಿರಳೆಗಳನ್ನು ನೈಸರ್ಗಿಕವಾಗಿ ತೊಡೆದುಹಾಕಬಹುದು.

ಮೊದಲು ಕಿತ್ತಳೆ ಸಿಪ್ಪೆಯನ್ನು ಚೆನ್ನಾಗಿ ಒಣಗಿಸಿ. ಇದನ್ನು ಬಿಸಿಲಿನಲ್ಲಿ ಒಣಗಿಸಬಹುದು ಅಥವಾ ಮೈಕ್ರೊವೇವ್ ಒಲೆಯಲ್ಲಿ ಬಿಸಿ ಮಾಡಬಹುದು. ಅದು ಚೆನ್ನಾಗಿ ಒಣಗಿದ ನಂತರ, ಜಿರಳೆಗಳು ವಾಸಿಸುವ ಸ್ಥಳದಲ್ಲಿ ಇರಿಸಿ, ಜಿರಳೆಗಳು ಅದರ ವಾಸನೆಯನ್ನು ಸಹಿಸುವುದಿಲ್ಲ. ಹಾಗಾಗಿ ಅವುಗಳಿಂದ ದೂರ ಉಳಿಯುತ್ತವೆ.

ಅಡುಗೆ ಮನೆಯಲ್ಲಿ ಸಾಮಾನ್ಯವಾಗಿ ಜಿರಳೆಗಳು ಯಾವಾಗಲೂ ಇರುತ್ತವೆ. ಅದನ್ನು ತೊಡೆದುಹಾಕಲು ಸಾಧ್ಯವಿರುವ ಎಲ್ಲವನ್ನೂ ಪ್ರಯತ್ನಿಸಿರುತ್ತೇವೆ. ಇನ್ನು ಕಿಚನ್‌ʼನಲ್ಲಿ ರಾಸಾಯನಿಕ ಸ್ಪ್ರೇಗಳನ್ನು ಬಳಕೆ ಮಾಡುವುದು ಸಹ ಅಪಾಯಕಾರಿ. ಹೀಗಾಗಿ ಈ ಮೇಲೆ ತಿಳಿಸಿರುವ ಟಿಪ್ಸ್ ಪ್ರಯೋಜನಕಾರಿ ಎನ್ನಬಹುದಾಗಿದೆ.


Spread the love

LEAVE A REPLY

Please enter your comment!
Please enter your name here