ಧಾರವಾಡ: ಧಾರವಾಡದ ಮಾಳಮಡ್ಡಿ ನಾಲ್ಕನೇ ಕ್ರಾಸ್‌ನಲ್ಲಿ ಗಾಳಿಗೆ ತೆಂಗಿನಮರವೊಂದು ಧರೆಗುರುಳಿದ್ದು, ಅದೇ ರಸ್ತೆಯಲ್ಲಿ ಸಾಗುತ್ತಿದ್ದ ಪಾದಚಾರಿಗಳು ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ ತೆಂಗಿನಮರ ಬೀಳುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
Advertisement
ಮಾಳಮಡ್ಡಿ ನಾಲ್ಕನೇ ಕ್ರಾಸ್ ರಸ್ತೆಯಲ್ಲಿ ಮೂರು ಜನ ಪಾದಚಾರಿಗಳು ನಡೆದುಕೊಂಡು ಹೋಗುತ್ತಿದ್ದರು. ಅವರು ಕೊಂಚ ಮುಂದೆ ಸಾಗಿದ್ದಷ್ಟೇ ತಡ ಹಿಂದೆ ಗಾಳಿಗೆ ತೆಂಗಿನಮರ ನೆಲಕ್ಕುರುಳಿದೆ. ಅದೃಷ್ಟವಶಾತ್ ಆ ಪಾದಚಾರಿಗಳು ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.