ಚಿಕ್ಕಮಗಳೂರು: ಚಿಕ್ಕಮಗಳೂರಲ್ಲಿ ಎರಡು ಗ್ರಾಮಗಳ ಮಧ್ಯೆ ಜಲಕ್ಕಾಗಿ ಕೋಲ್ಡ್ ವಾರ್ ನಡೆದಿದೆ.ವೇದಾ ನದಿ ನೀರಿಗಾಗಿ 2 ಊರಿನ ರೈತರ ಮಧ್ಯೆ ಕೋಲ್ಡ್ ವಾರ್ ಶುರುವಾಗಿದೆ.
Advertisement
ಕಡೂರು ತಾಲೂಕಿನ ವೇದಾ ನದಿ ನೀರಿಗಾಗಿ ಹುಲಿಕೆರೆ-ನಾಗೇನಹಳ್ಳಿ ಮತ್ತು ಕಡೂರು-ಸಖರಾಯಪಟ್ಟಣ ರೈತರ ಮಧ್ಯೆ ವಾರ್ ಶುರುವಾಗಿದೆ. ಹುಲಿಕೆರೆ-ನಾಗೇನಹಳ್ಳಿ ಕೆರೆಗೆ ನೀರು ಹರಿಸಲು ಕಡೂರು-ಸಖರಾಯಪಟ್ಟಣ ರೈತರು ವಿರೋಧ ವ್ಯಕ್ತಪಡಿಸಿದ್ದಾರೆ.
ನೀರು ವಿವಾದ ಹಿನ್ನೆಲೆಯಲ್ಲಿ ಶಾಸಕ ಆನಂದ್ ಸಮ್ಮುಖದಲ್ಲಿ ಸಭೆ ನಡೆದಿತ್ತು. ಈ ವೇಳೆ ಎರಡು ಗ್ರಾಮಸ್ಥರ ನಡುವೆ ಕೈಕೈ ಮಿಲಾಯಿಸುವ ಹಂತಕ್ಕೂ ಜಗಳ ಹೋಗಿದೆ. ಕೊನೆಗೆ ಪೊಲೀಸರು ಪರಿಸ್ಥಿತಿಯನ್ನು ತಿಳಿಗೊಳಿಸಿದ್ದು, ಅಹಿತಕರ ಘಟನೆ ತಪ್ಪಿದೆ.