ಬೆಂಗಳೂರು:- ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಹೈಕೋರ್ಟ್ ನಿಂದ ಬೇಲ್ ಪಡೆದು ಒಂದೆಡೆ ಡಿ ಗ್ಯಾಂಗ್ ನಿಟ್ಟುಸಿರು ಬಿಟ್ಟಿದೆ. ಇದರ ಮಧ್ಯೆ ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲು ಗೃಹ ಇಲಾಖೆ ತಯಾರಿ ನಡೆಸಿದೆ.
Advertisement
ಹೀಗಾಗಿ ಬೇಲ್ ಸಿಕ್ಕರೂ ಡಿ ಗ್ಯಾಂಗ್ ಗೆ ಸುಪ್ರೀಂ ಟೆನ್ಷನ್ ಮಾತ್ರ ದಿನೇ ದಿನೇ ಹೆಚ್ಚುತ್ತಿದೆ. ಬಿಜಿಎಸ್ ಆಸ್ಪತ್ರೆಯಲ್ಲಿರುವ ದರ್ಶನ್‌ಗೆ ಗುರುವಾರದವರೆಗೂ ಚಿಕಿತ್ಸೆ ನಡೆಯಲಿದೆ. ಬೆನ್ನುನೋವು, ಕಾಲುನೋವಿಗೆ ಫಿಸಿಯೋಥೆರಪಿ ಮೂಲಕ ನೋವು ಶಮನಕ್ಕೆ ವೈದ್ಯರು ಪ್ಲ್ಯಾನ್ ಮಾಡಿದ್ದಾರೆ. ಪೊಲೀಸರು ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಹೋಗದಿದ್ದರೆ ಡಿಸ್ಚಾರ್ಜ್ ಆಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇನ್ನೂ ಪ್ರಕರಣದ ಎ6 ಜಗದೀಶ್‌ಗೆ ಬೇಲ್ ಸಿಕ್ಕರೂ ಶೂರಿಟಿ ಸಿಕ್ಕಿಲ್ಲ. ಹಾಗಾಗಿ, ನಟರನ್ನು ನಂಬಿ ಯಾರೂ ಮೋಸ ಹೋಗ್ಬೇಡಿ ಅಂತ ಜಗದೀಶ್ ತಾಯಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.