ವಿಜ್ಞಾನ ಪ್ರದರ್ಶನ ಕ್ರಿಯಾಶೀಲತೆಗೆ ಸಹಕಾರಿ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ಮಕ್ಕಳ ಕ್ರಿಯಾಶೀತೆಗೆ ವಿಜ್ಞಾನ ವಸ್ತು ಪ್ರದರ್ಶನ ಹಾಗೂ ವಿಜ್ಞಾನ ವಿಚಾರಗೋಷ್ಠಿ, ವಿಜ್ಞಾನ ನಾಟಕ ಸ್ಪರ್ಧೆ ಸಹಕಾರಿ ಎಂದು ಬ್ರೈಟ್ ಹಾರಿಝೊನ್ ಪ್ರೌಢಶಾಲೆಯ ಸಂಸ್ಥಾಪಕ ಬಿ.ಡಿ. ಹರ್ತಿ ಹೇಳಿದರು.

Advertisement

ತಾಲೂಕು ಮಟ್ಟದ ವಿಜ್ಞಾನ ನಾಟಕ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಬ್ರೈಟ್ ಹಾರಿಝೊನ್ ಪ್ರೌಢಶಾಲೆಯ ಮಕ್ಕಳನ್ನು ಸನ್ಮಾನಿಸಿ ಮಾತನಾಡಿ, ಇಂದು ಆಧುನಿಕತೆ ಬೆಳೆದಂತೆ ವಿಜ್ಞಾನ-ತಂತ್ರಜ್ಞಾನದಲ್ಲಿ ಮಕ್ಕಳು ಭಾಗವಹಿಸುವಿಕೆಯಿಂದ ಮಕ್ಕಳಲ್ಲಿ ಕ್ರಿಯಾಶೀಲತೆ ಹೆಚ್ಚಾಗಿದ್ದು, ಮಕ್ಕಳ ಕಲಿಕೆಗೆ ಪೂರಕವಾಗಿ ಶಿಕ್ಷಕರು, ಪಾಲಕರು ಸಹಕಾರಿಸಿದಲ್ಲಿ ಸಮಾಜದಲ್ಲಿ ಉತ್ತಮ ವಿದ್ಯಾರ್ಥಿಯಾಗಿ ಬೆಳೆಯಲು ಸಾಧ್ಯವಾಗುತ್ತದೆ ಎಂದರು.

ಗದಗ ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿ ವಿ.ವಿ. ನಡುವಿನಮನಿ, ಸಮನ್ವಯಾಧಿಕಾರಿ ಜಿ.ಎ. ಭಾವಿಕಟ್ಟಿ, ಎಸ್.ಎ. ಬೆಳದಡಿ, ಪ್ರಾಚಾರ್ಯ ಮಂಜುನಾಥ ದೆಸಾಯಿ, ಗಿರಿಧರ ಹೊಸಳ್ಳಿ ಇದ್ದರು.


Spread the love

LEAVE A REPLY

Please enter your comment!
Please enter your name here