HomeBengaluru Newsಇನ್ನೋವಾ ಕಾರಿನಲ್ಲಿ ಬಂದು ಶಾಲಾ ಬಾಲಕಿಯರ ಜತೆ ಅಸಭ್ಯ ವರ್ತನೆ!

ಇನ್ನೋವಾ ಕಾರಿನಲ್ಲಿ ಬಂದು ಶಾಲಾ ಬಾಲಕಿಯರ ಜತೆ ಅಸಭ್ಯ ವರ್ತನೆ!

For Dai;y Updates Join Our whatsapp Group

Spread the love

ಬೆಂಗಳೂರು:- ನಗರದ ಹೆಚ್​ಎಎಲ್​ ಖಾಸಗಿ ಶಾಲೆ ಬಳಿ ಕುಡಿದ ಅಮಲಿನಲ್ಲಿ ಪುಂಡರ ಗ್ಯಾಂಗ್​ವೊಂದು ಇನೋವಾ ಕಾರಿನಲ್ಲಿ ಬಂದು ಶಾಲಾ ಬಾಲಕಿಯರ ಜೊತೆ ಅಸಭ್ಯವಾಗಿ ವರ್ತಿಸಿದ ಘಟನೆ ಜರುಗಿದೆ.

ಫುಟ್​ಪಾತ್ ಮೇಲೆ ಓಡಾಡುತ್ತಿದ್ದ ಮಕ್ಕಳ ಜೊತೆ ಅಸಭ್ಯವಾಗಿ ವರ್ತಿಸುವುದರೊಂದಿಗೆ ಅಶ್ಲೀಲ ಶಬ್ದಗಳಿಂದ ನಿಂದಿಸಿ ವಿಕೃತಿ ಮೆರೆದಿದ್ದಾರೆ. ಇದನ್ನು ಪ್ರಶ್ನಿಸಿದ ಸ್ಥಳೀಯರ ಮೇಲೆ ಮೂವರು ಯುವಕರು ಹಲ್ಲೆಗೆ ಮುಂದಾಗಿದ್ದರು.

ಕುಡಿದ ನಶೆಯಲ್ಲಿದ್ದ ಯುವಕರ ಗುಂಪು ಫುಟ್​ಪಾತ್ ಮೇಲೆ ಇನೋವಾ ಕಾರು ಹತ್ತಿಸಿದ್ದಾರೆ. ನಶೆಯಲ್ಲಿದ್ದ ಓರ್ವ ನಿಲ್ಲಲಾಗದೆ ರಸ್ತೆಗೆ ಬಿದ್ದು ಕಿರುಚಾಡಿದ್ದಾನೆ. ಕುಡುಕರ ವಿಕೃತಿ ಮುಂದುವರಿದಾಗ ಕಂಟ್ರೋಲ್​ ರೂಮ್​ಗೆ ಸ್ಥಳೀಯರಿಂದ ಮಾಹಿತಿ ನೀಡಲಾಗಿದ್ದು, ಪೊಲೀಸ್ ವಾಹನ ಬರುವಷ್ಟರಲ್ಲಿ ಸ್ಥಳದಿಂದ ಕಾಲ್ಕಿತ್ತಿದ್ದಾರೆ. ಗಾಂಜಾ ನಶೆ, ಕುಡಿದ ಅಮಲಿನಲ್ಲಿ ದೌರ್ಜನ್ಯವೆಸಗಿರುವ ಶಂಕೆ ವ್ಯಕ್ತವಾಗಿದೆ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!