ಕೋಲಾರ: ನ್ಯಾಯಕ್ಕಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ ನನಗೆ ಬಂಗಾರಪೇಟೆ ಸಿಪಿಐ ನಂಜಪ್ಪ ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಮಹಿಳೆಯೊಬ್ಬರು ಆರೋಪಿಸಿರುವ ವಿಡಿಯೋ ವೈರಲ್ ಆಗಿದೆ.
ಮಹಿಳಾ ಪೊಲೀಸರಿಲ್ಲದ ವೇಳೆ ನನ್ನನ್ನು ಬಂಧಿಸಿ ಅವಮಾನ ಮಾಡಿರುವ ಇನ್ಸ್ ಪೆಕ್ಟರ್, ಪುರುಷ ಪೊಲೀಸರನ್ನ ಆಗಾಗ ಮನೆ ಬಳಿ ಕಳುಹಿಸಿ ಕಿರುಕುಳ ನೀಡುತ್ತಿದ್ದಾರೆ.
ನಾನು ಮತ್ತು ನನ್ನ ಗಂಡನನ್ನು ಠಾಣೆಗೆ ಕರೆಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಪೊಲೀಸರ ದೌರ್ಜನ್ಯನಿಂದ ಅಸ್ವಸ್ಥಳಾಗಿರುವ ತಾನು ಆಸ್ಪತ್ರೆಗೆ ದಾಖಲಾಗಿದ್ದೇನೆ ಎಂದು ಆಸ್ಪತ್ರೆ ಬೆಡ್ ಮೇಲೆ ಕುಳಿತು ಮಹಿಳೆ ವಿಡಿಯೋ ಮಾಡಿದ್ದಾರೆ.
ಮಹಿಳೆಯ ಆರೋಪಗಳೆಲ್ಲ ಸುಳ್ಳು ಎಂದು ನಿರಾಕರಿಸಿರುವ ಇನ್ಸ್ಪೆಕ್ಟರ್ ನಂಜಪ್ಪ ಆಕೆ ಮತ್ತು ಪತಿಯ ವಿರುದ್ಧ ಈಗಾಗಲೆ ಅಟ್ರಾಸಿಟಿ ಪ್ರಕರಣ ಇದೆ. ಈ ಸಂಬಂಧ ವಿಚಾರಣೆಗೆ ಕರೆಸಿದ ಕಾರಣಕ್ಕೆ ವಿನಾಕಾರಣ ಆರೋಪ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.