ವಿಜಯಸಾಕ್ಷಿ ಸುದ್ದಿ, ಮುಳಗುಂದ: ದುಶ್ಚಟಗಳು ಮನುಷ್ಯನನ್ನು ಸಾಮಾಜಿಕ ಕಳಂಕಕ್ಕೆ ಗುರಿ ಮಾಡುತ್ತವೆ. ಶ್ರಮಿಕ ವರ್ಗದವರು ಎಲ್ಲಾ ತರಹದ ಚಟಗಳನ್ನು ತ್ಯಜಿಸಿ ಸುಖೀ ಜೀವನ ನಡೆಸಬೇಕು ಎಂದು ಡಾ. ಎಸ್.ಸಿ. ಚವಡಿ ಹೇಳಿದರು.
ಅವರು ಪಟ್ಟಣದ ರೇಣುಕಾ ಯಲ್ಲಮ್ಮ ದೇವಸ್ಥಾನದಲ್ಲಿ ಪತಂಜಲಿ ಯೋಗ ಸಮಿತಿ ವತಿಯಿಂದ `ಬೇಡ ಮದ್ಯಪಾನ ಮಾಡು ಯೋಗ-ಧ್ಯಾನ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಇಂದು ಆರೋಗ್ಯ ಸಂಪತ್ತಿನ ಮುಂದೆ ಎಲ್ಲಾ ಸಂಪತ್ತುಗಳು ನಶ್ವರವಾಗಿದ್ದು, ಆಹಾರ ಪದ್ಧತಿಯಲ್ಲಿ ಸಾಕಷ್ಟು ಬದಲಾವಣೆಯಿಂದ ಇಂದು ಅನೇಕ ರೋಗ ರುಜಿನುಗಳಿಗೆ ತುತ್ತಾಗುತ್ತಿದ್ದೇವೆ. ದುಶ್ಚಟಗಳಾದ ಮದ್ಯಪಾನ, ಸಿಗರೇಟು, ತಂಬಾಕು, ಗುಟುಕಾ ಸೇವನೆಯಿಂದ ನಮ್ಮ ಆರೋಗ್ಯ ಹಾಳಾಗುತ್ತಿದೆ. ನಿತ್ಯ ಯೋಗ-ಧ್ಯಾನ ಮಾಡುವುದರಿಂದ ದೈಹಿಕ ಹಾಗೂ ಮಾನಸಿಕವಾಗಿ ಸದೃಢರಾಗಲು ಸಾಧ್ಯವಾಗುತ್ತದೆ ಎಂದರು.
ಪ.ಪA ಸದಸ್ಯ ಎಸ್.ಸಿ. ಬಡ್ನಿ ಮಾತನಾಡಿ, ಆರೋಗ್ಯ ಕಾಪಾಡಿಕೊಳ್ಳುವುದು ನಮ್ಮ ಕೈಯಲ್ಲಿದೆ. ಮಕ್ಕಳು ಹಾನಿಕಾರಕ ಪದಾರ್ಥಗಳನ್ನು ನಿತ್ಯ ಸಾಕಷ್ಟು ಸೇವನೆ ಮಾಡುತ್ತಿದ್ದಾರೆ. ಇದರಿಂದ ಮಕ್ಕಳ ಆರೋಗ್ಯ ಹಡಗೆಡುತ್ತಿದ್ದು, ಮಕ್ಕಳು ಮನೆಯಲ್ಲಿನ ಆಹಾರ ಪದ್ಧತಿ ರೂಢಿಸಿಕೊಳ್ಳಬೇಕು. ಪೌಷ್ಟಿಕಯುಕ್ತ ಆಹಾರ ಸೇವನೆ ಮಾಡಿ ಆರೋಗ್ಯವಂತ ಸಮಾಜ ನಿರ್ಮಾಣ ಮಾಡಬೇಕು ಎಂದರು.
ಅನೂಪ ಕೆಂಚನಗೌಡರ, ಚಿನ್ನಪ್ಪ ಕುಲಕರ್ಣಿ, ಅಕ್ಕಮ್ಮಾ ನೀಲಗುಂದ, ನಾಗವೇಣಿ, ಯೋಗ ಶಿಕ್ಷಕ ಪ್ರಕಾಶ ಮದ್ದಿನ ಇದ್ದರು.