ಜೂನ್ 22ರಂದು ಶ್ರೀ ಚನ್ನವೀರ ಶರಣರ ಪುಣ್ಯಸ್ಮರಣೋತ್ಸವ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ತಾಲೂಕಿನ ಸುಕ್ಷೇತ್ರ ಬಳಗಾನೂರಿನ ಚಿಕೇನಕೊಪ್ಪದ ಶ್ರೀ ಚನ್ನವೀರ ಶರಣರ 30ನೇ ಪುಣ್ಯಸ್ಮರಣೋತ್ಸವ, 1008 ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ, ಶ್ರೀ ಶಿವಶಾಂತವೀರ ಶರಣರ ತುಲಾಭಾರ ಸಮಾರಂಭ ಜೂನ್ 22ರಂದು ಬೆಳಿಗ್ಗೆ 10 ಗಂಟೆಗೆ ಬಳ್ಳಾರಿಯ ಪಾರ್ವತಿ ನಗರದ ಬಸವ ಭವನದಲ್ಲಿ ಜರುಗಲಿದೆ.

Advertisement

ಪೂಜ್ಯ ಶ್ರೀ ಶಿವಶಾಂತವೀರ ಶರಣರು ಕಾರ್ಯಕ್ರಮದ ಪಾವನ ಸನ್ನಿಧಾನ ವಹಿಸುವರು. ಯರನಾಳ ಸಂಸ್ಥಾನ ಹಿರೇಮಠದ ಶ್ರೀ ಶಿವಪ್ರಸಾದ ದೇವರು ಶುಭ ಸಂದೇಶ ನೀಡುವರು. ಬಳ್ಳಾರಿಯ ಎಸ್.ಜಿ.ಟಿ ಪದವಿಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕ ಬಸವರಾಜ ಅಮಾತಿ ಪ್ರಾಸ್ತಾವಿಕ ನುಡಿಗಳನ್ನಾಡುವರು. ಕೊತ್ತಲಚಿಂತದ ಶರಣಕುಮಾರ, ಬಳ್ಳಾರಿಯ ಸುಧಾಕರವರಿಂದ ಸಂಗೀತ ಸೇವೆ ಜರುಗುವುದು. ಶರಣ ಬಳಗದ ಸದ್ಭಕ್ತರಿಂದ ಶ್ರೀ ಶಿವಶಾಂತವೀರ ಶರಣರ ತುಲಾಭಾರದ ಸೇವೆ ಜರುಗವುದು. ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಕೆ.ಬಿ. ಸಿದ್ದಲಿಂಗಪ್ಪ ನಿರೂಪಿಸುವರು. ಸಮಸ್ತ ಸದ್ಭಕ್ತರು ಪಾಲ್ಗೊಳ್ಳಲು ಶ್ರೀಮಠದ ಪ್ರಕಟಣೆ ಕೋರಿದೆ.


Spread the love

LEAVE A REPLY

Please enter your comment!
Please enter your name here