HomeGadag Newsಅರುಣೋದಯ ಶಾಲೆಯಲ್ಲಿ ಪ್ರಾರಂಭೋತ್ಸವ

ಅರುಣೋದಯ ಶಾಲೆಯಲ್ಲಿ ಪ್ರಾರಂಭೋತ್ಸವ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಗದಗ : ಬೇಸಿಗೆ ರಜೆಯ ಬಳಿಕ ಗದುಗಿನ ಸೇವಾ ಭಾರತಿ ಟ್ರಸ್ಟ್ ನ ಅರುಣೋದಯ ವಿಶೇಷ ಮಕ್ಕಳ ಶಾಲೆಯ ವಿಶೇಷ ಅಗತ್ಯವುಳ್ಳ ಮಕ್ಕಳು ಶಾಲಾ ಪ್ರಾರಂಭೋತ್ಸವಕ್ಕೆ ಉತ್ಸಾಹದೊಂದಿಗೆ ಆಗಮಿಸಿದರು.

ಶಾಲಾ ಆಡಳಿತ ಮಂಡಳಿಯ ಉಪಾಧ್ಯಕ್ಷ ಲುಕ್ಕಣಸಾ ರಾಜೋಳಿ, ಕಾರ್ಯದರ್ಶಿ ಜಯರಾಜ ಮುಳಗುಂದ, ಸದಸ್ಯರಾದ ಡಾ. ಉಮೇಶ ಹಾದಿ ಅವರು ಮನೆಯಿಂದ ಶಾಲೆಗೆ ಬಂದಿಳಿದ ವಿದ್ಯಾರ್ಥಿ- ವಿದ್ಯಾರ್ಥಿನಿಯರಿಗೆ ಗುಲಾಬಿ ಹೂವು ಕೊಡುವ ಮೂಲಕ ಶಾಲೆಗೆ ಬರಮಾಡಿಕೊಂಡರು.

ವಿದ್ಯಾರ್ಥಿಗಳಿಗೆ ಸಿಹಿ ವಿತರಿಸಿದ ಶಾಲಾ ಆಡಳಿತ ಮಂಡಳಿಯ ಪದಾಧಿಕಾರಿಗಳು ಮಕ್ಕಳಿಗೆ ಶುಭ ಹಾರೈಸಿ ವಿಶೇಷ ಅಗತ್ಯವುಳ್ಳ ಈ ಮಕ್ಕಳು ಮಾನಸಿಕವಾಗಿ ಸದೃಢವಾಗಿ ಎಲ್ಲ ಮಕ್ಕಳಂತೆ ಸಹಜ ಜೀವನ ನಡೆಸುವಂತಾಗಲಿ, ಮಕ್ಕಳ ಬುದ್ಧಿಮಟ್ಟ,ಜ್ಞಾನ ಕೌಶಲ್ಯ ವೃದ್ಧಿಯಾಗಿ ಉತ್ತಮ ಪ್ರಜೆಗಳಾಗಿ ಬಾಳಲಿ ಎಂದರು.

ಶಾಲಾ ಮುಖ್ಯೋಪಾಧ್ಯಾಯ ಮಲ್ಲಪ್ಪ ಹಕ್ಕಿ, ಶಿಕ್ಷಕ ಶಿಕ್ಷಕಿಯರಲ್ಲದೆ, ಪಾಲಕ ಪೋಷಕರು, ಅಟೋ ಚಾಲಕರು ಸಮಾರಂಭದಲ್ಲಿ ಉಪಸ್ಥಿತರಿದ್ದರು.


Spread the love

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!