ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಪಟ್ಟಣದ ಕರೇವಡಿಮಠದ ಪಟ್ಟಾಧ್ಯಕ್ಷರಾದ ಲಿಂ.ಶ್ರೀ ಶಂಕರ ಶಿವಾಚಾರ್ಯ ಮಹಾಸ್ವಾಮಿಗಳ ಪುಣ್ಯಾರಾಧನೆ ಸ್ಮರಣೋತ್ಸವ ಆ.29ರಂದು ಪಟ್ಟಣದ ಹಳ್ಳದಕೇರಿಯಲ್ಲಿರುವ ಕರೇವಾಡಿಮಠದಲ್ಲಿ ನಡೆಯಲಿದೆ.
ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ಮುಕ್ತಿಮಂದಿರ ಧರ್ಮಕ್ಷೇತ್ರದ ಪಟ್ಟಾಧ್ಯಕ್ಷರಾದ ವಿಮಲರೇಣುಕ ವೀರಮುಕ್ತಿಮುನಿ ಶಿವಾಚಾರ್ಯ ಮಹಾಸ್ವಾಮಿಗಳು ವಹಿಸಲಿದ್ದು, ಕರೇವಾಡಿಮಠದ ಈಗಿನ ಪಟ್ಟಾಧ್ಯಕ್ಷರಾದ ಶ್ರೀ ಮಳೆಮಲ್ಲಿಕಾರ್ಜುನ ಮಹಾಸ್ವಾಮಿಗಳು ಅಧ್ಯಕ್ಷತೆ ವಹಿಸಲಿದ್ದಾರೆ. ಗುರುವಾರ ಮುಂಜಾನೆ 8 ಗಂಟೆಗೆ ಗಂಗಾದೇವತಾ ಪೂಜೆ, ಜ.ಪಂಚಾಚಾರ್ಯ ದ್ವಜಾರೋಹಣ, ಲಿಂ.ಶಂಕರ ಶಿವಾಚಾರ್ಯ ಮಹಾಸ್ವಾಮಿಗಳ ಗದ್ದುಗೆಗೆ ರುದ್ರಾಭಿಷೇಕ, ಶಿವಅಷ್ಟೋತ್ತರ ನಾಮಾವಳಿ, ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ ನಡೆಯಲಿದೆ. ಶಿವಗಣಾರಾಧನೆ ನಿಮಿತ್ತ ಮದ್ಯಾಹ್ನ 1 ಗಂಟೆಗೆ ಅನ್ನದಾಸೋಹ, ಮಹಾಪ್ರಸಾದ ಸೇವೆ ಜರುಗುವದು.
ಅಂದು ಸಂಜೆ 6 ಗಂಟೆಗೆ ಧರ್ಮ ಸಭೆ ನಡೆಯಲಿದ್ದು, ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ಮೈಸೂರ್ ಹಾಗೂ ಬೆಳ್ಳಟ್ಟಿ ಜಪದಕಟ್ಟಿ ಮಠ ಬನ್ನಿಕೊಪ್ಪಬ್ರಹನ್ಮಠದ ಶ್ರೀ ಸುಜ್ಞಾನದೇವ ಶಿವಾಚಾರ್ಯ ಮಹಾಸ್ವಾಮಿಗಳು ಹಾಗೂ ಕರೆವಡಿಮಠದ ನಿಯೋಜಿತ ಉತ್ತರಾಧಿಕಾರಿಗಳಾದ ಮಂಜುನಾಥ ದೇವರು ಕರೆವಡಿಮಠ ವಹಿಸಲಿದ್ದು, ಸಂಜೆ 7 ಗಂಟೆಗೆ ಜಾನಪದ ಕಲಾವಿದ ಹರ್ಲಾಪೂರದ ಶಂಬಯ್ಯ ಹಿರೇಮಠ ಹಾಗೂ ತಂಡದವರಿಂದ ಜಾಗೃತಿಗಾಗಿ ಜಾನಪದ ಕಾರ್ಯಕ್ರಮ ಜರುಗಲಿದೆ. ಪಟ್ಟಣದ ಶಾರದಾ ಸ್ವರಾಂಜಲಿ ಸಂಗೀತ ಪಾಠಶಾಲೆ ಇವರಿಂದ ಸಂಗೀತ ಸುಧೆ ಹಾಗೂ ಶಕ್ತಿ ಭಜನಾ ಸಂಘ, ಮಾರುತಿ ಭಜನಾ ಸಂಘ ಹಳ್ಳದಕೆರಿ ಓಣಿ ಇವರಿಂದ ಭಜನಾ ಸೇವೆ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.