ನಮಗೆ ಕಮಿಷನ್‌ʼನಿಂದ ನ್ಯಾಯ ಸಿಗಲ್ಲ, ಸುಪ್ರೀಂಗೆ ಹೋಗಬೇಕು ಅಷ್ಟೆ: ಸಚಿವ ರಾಮಲಿಂಗಾರೆಡ್ಡಿ

0
Spread the love

ಬೆಂಗಳೂರು: ವೋಟ್ ಚೋರಿ ಬಗ್ಗೆ ರಾಹುಲ್ ಗಾಂಧಿ ಸುದ್ದಿಗೋಷ್ಠಿ ಸಂಬಂಧ ನಮಗೆ ಕಮಿಷನ್‌ನಿಂದ ನ್ಯಾಯ ಸಿಗುವ ಭರವಸೆ ಇಲ್ಲ. ಸುಪ್ರೀಂಕೋರ್ಟ್‌ಗೆ ಹೋಗಬೇಕು ಅಷ್ಟೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು,

Advertisement

ಲೋಕಸಭೆ ಚುನಾವಣೆ ವೇಳೆ ಮೂರನೇ ಎಲೆಕ್ಷನ್ ಆಗುವ ಹೊತ್ತಿಗೆ ಬಿಜೆಪಿಯವರ ಪಾಪ್ಯುಲಾರಿಟಿ ಕಡಿಮೆ ಆಯಿತು. ಹೀಗಾಗಿ ಗೆಲ್ಲೋಕೆ ದೇಶದ ಎಲ್ಲಾ ಭಾಗದಲ್ಲಿ ಮತ ತೆಗೆಯೋ ಕೆಲಸ ಮಾಡಿದರು. ಮಹದೇವಪುರ, ಆಳಂದ ಸೇರಿ ಹಲವು ಕಡೆ ಹೀಗೆ ಮಾಡಿದ್ದಾರೆ.

ಬಿಜೆಪಿ ಅವರು ಅಧಿಕಾರ ಇರುವ ಕಡೆ ವಿಪಕ್ಷಗಳ ಕ್ಷೇತ್ರದ ಕಡೆ ಜಾಸ್ತಿ ಮಾಡಿದ್ದಾರೆ. ಇಂತಹ ಮತ ಅಕ್ರಮ ದೇಶದಲ್ಲಿ ವ್ಯಾಪಕವಾಗಿ ನಡೆಯುತ್ತಿದೆ. ಎಲೆಕ್ಷನ್ ಕಮಿಷನ್ ಕೇಂದ್ರದ ಕೈಗೊಂಬೆಯಾಗಿದೆ. ನಮಗೆ ಕಮಿಷನ್‌ನಿಂದ ನ್ಯಾಯ ಸಿಗುವ ಭರವಸೆ ಇಲ್ಲ. ಸುಪ್ರೀಂಕೋರ್ಟ್‌ಗೆ ಹೋಗಬೇಕು ಅಷ್ಟೆ ಎಂದು ತಿಳಿಸಿದರು.


Spread the love

LEAVE A REPLY

Please enter your comment!
Please enter your name here