ಬೆಂಗಳೂರು:- ಮೆಟ್ರೋ ಸ್ಟೇಷನ್ಗಳಲ್ಲಿ ಪಾರ್ಕಿಂಗ್ಗಾಗಿ ಪ್ರಯಾಣಿಕರ ಪರದಾಟ ನಡೆಸಿದ್ದಾರೆ. ಯೆಲ್ಲೂ ಲೈನ್ ಮೆಟ್ರೋ ಸ್ಟೇಷನ್ಗಳಲ್ಲಿ ಪಾರ್ಕಿಂಗ್ ವ್ಯವಸ್ಥೆ ಇಲ್ಲದೆ ಪ್ರಯಾಣಿಕರು ಪರದಾಡುವಂತಾಗಿದೆ.
ಆರ್.ವಿ ರೋಡ್ನಿಂದ ಬೊಮ್ಮಸಂದ್ರ ಮೆಟ್ರೋ ಮಾರ್ಗದ 16 ಮೆಟ್ರೋ ಸ್ಟೇಷನ್ಗಳ ಪೈಕಿ 11 ಸ್ಟೇಷನ್ ಗಳಲ್ಲಿ ಮಾತ್ರ ಪಾರ್ಕಿಂಗ್ ವ್ಯವಸ್ಥೆ ಇದೆ. ಉಳಿದ 5 ಮೆಟ್ರೋ ಸ್ಟೇಷನ್ಳಲ್ಲಿ ಪಾರ್ಕಿಂಗ್ ವ್ಯವಸ್ಥೆಯೇ ಇಲ್ಲ. ಪ್ರತಿದಿನ ನಮ್ಮ ಮೆಟ್ರೋದ ಮೂರು ಮಾರ್ಗದಲ್ಲೂ ಸುಮಾರು 10 ಲಕ್ಷ ಮೆಟ್ರೋ ಪ್ರಯಾಣಿಕರು ಪ್ರಯಾಣ ಮಾಡುತ್ತಿದ್ದಾರೆ.
ಅದರಲ್ಲಿ ಯೆಲ್ಲೋ ಲೈನ್ನಲ್ಲಿ ಸುಮಾರು 70 ರಿಂದ 80 ಸಾವಿರ ಪ್ರಯಾಣಿಕರು ಪ್ರಯಾಣ ಮಾಡುತ್ತಾರೆ. ನಮ್ಮ ಮೆಟ್ರೋದ ಗ್ರೀನ್ ಮತ್ತು ನೇರಳೆ ಮಾರ್ಗದಲ್ಲಿ ಒಟ್ಟು 83 ಮೆಟ್ರೋ ಸ್ಟೇಷನ್ಗಳಿವೆ. ಅವುಗಳಲ್ಲಿ 18 ಸ್ಟೇಷನ್ಗಳಲ್ಲಿ ಪಾರ್ಕಿಂಗ್ ವ್ಯವಸ್ಥೆ ಇಲ್ಲ. ಈ ಅವ್ಯವಸ್ಥೆಯಿಂದ ಬೇಸತ್ತ ಜನರು ಸ್ಟೇಷನ್ಗಳ ಅಕ್ಕ ಪಕ್ಕದಲ್ಲಿರುವ ಮನೆಗಳ ಮುಂದೆ ವಾಹನಗಳನ್ನು ಪಾರ್ಕ್ ಮಾಡಿ ಹೋಗುತ್ತಿದ್ದಾರೆ.
ಈ ಬಗ್ಗೆ ಪ್ರಯಾಣಿಕರು ಮೆಟ್ರೋ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರೆ, ಮೆಟ್ರೋ ಅಧಿಕಾರಿಗಳು ಈಗಾಗಲೇ ಪಾರ್ಕಿಂಗ್ ನೀಡಿದ್ದೇವೆ ಆದರೆ ಟೆಂಡರ್ ಸಮಸ್ಯೆ ಆಗಿದ್ದು, ಕೂಡಲೇ ಸಮಸ್ಯೆ ಬಗೆಹರಿಸಲು ಮುಂದಾಗುತ್ತೇವೆ ಎಂದು ಪ್ರತಿಕ್ರಿಯಿಸಿದ್ದಾರೆ. ದಿನನಿತ್ಯ ಓಡಾಡುವ ಮೆಟ್ರೋ ಪ್ರಯಾಣಿಕರು ಈ ಬಗ್ಗೆ ಬಿಎಂಆರ್ಸಿಎಲ್ ಅಧಿಕಾರಿಗಳು ಗಮನ ಹರಿಸಬೇಕು ಎಂದು ಆಗ್ರಹಿಸಿದ್ದಾರೆ.