ಬಿಗ್ ಬಾಸ್ ಕನ್ನಡ 12 ಆರಂಭವಾದ ದಿನದಿಂದಲೇ ಮನೆ ಗಲಾಟೆಗಳ, ಜಗಳಗಳ ಮತ್ತು ವಿವಾದಗಳ ಹೊಳೆಯಲ್ಲಿ ಮುಳುಗಿದೆ. ಮೊನ್ನೆಯಷ್ಟೇ ಗಿಲ್ಲಿ ನಟನ ವಿರುದ್ಧ ಮಹಿಳಾ ಆಯೋಗಕ್ಕೆ ದೂರು ಹೋಗಿದ್ದರೆ, ಈಗ ನಿರೂಪಕ ಕಿಚ್ಚ ಸುದೀಪ್ ಅವರೇ ಆರೋಪಗಳ ಸುತ್ತುವರೆದಿದ್ದಾರೆ. ಸುದೀಪ್ ವಿರುದ್ಧ ಮಹಿಳಾ ಆಯೋಗದಲ್ಲಿ ಪ್ರಕರಣ ದಾಖಲಾಗಿರುವ ವಿಚಾರ ಬಿಗ್ ಬಾಸ್ ತಂಡಕ್ಕೆ ದೊಡ್ಡ ಆಘಾತ ತಂದಿದೆ.
ಶೋನಲ್ಲಿ ನಡೆದ ಪ್ರಸಂಗದಲ್ಲಿ ರಕ್ಷಿತಾ ಶೆಟ್ಟಿಗೆ ಸುದೀಪ್ ಅವರು ತೀವ್ರವಾಗಿ ಗರಂ ಆಗಿ, “ನನ್ನ ಪಿತ್ತ ನೆತ್ತಿಗೇರುತ್ತಲ್ಲ ಅದಕ್ಕಿಂತ ಮೊದಲು…” ಎಂದು ಬೈದಿರುವುದು ಮಹಿಳೆಯರ ಮೇಲಿನ ಅವಮಾನ ಎಂದು ಸಂಧ್ಯಾ ಪವಿತ್ರ ಎಂಬವರು ಮಹಿಳಾ ಆಯೋಗದಲ್ಲಿ ದೂರು ನೀಡಿದ್ದಾರೆ. ಇದಲ್ಲದೆ ಬಿಡದಿ ಠಾಣೆಯಲ್ಲೂ ದೂರು ಸಲ್ಲಿಸಿದ್ದಾರೆ. ದೂರು ದಾಖಲಾದ ಬಳಿಕ, ಸುದೀಪ್ ಅಭಿಮಾನಿಗಳಿಂದ ಬೆದರಿಕೆ ಕರೆಗಳು ಬರುತ್ತಿವೆ ಎಂದು ಸಂಧ್ಯಾ ಆರೋಪಿಸಿದ್ದಾರೆ.
ಅಷ್ಟೇ ಅಲ್ಲ, ಬಿಗ್ ಬಾಸ್ ಸ್ಪರ್ಧಿ ಅಶ್ವಿನಿ ಗೌಡ ವಿರುದ್ಧವೂ ಸಂಧ್ಯಾ ದೂರು ನೀಡಿದ್ದಾರೆ. ರಕ್ಷಿತಾರನ್ನು ‘ಎಸ್ ಕ್ಯಾಟಗರಿ’ ಮತ್ತು ‘ಎಲ್ಲಿಂದ ಬಂದಿದ್ಯಾ ಗೊತ್ತಿಲ್ಲ’ ಎಂಬ ರೀತಿಯಲ್ಲಿ ನಿಂದಿಸಿದ್ದಾರೆ ಎಂದು ದೂರಿನಲ್ಲಿ ಹೇಳಲಾಗಿದೆ. ಗಿಲ್ಲಿ ನಟನ ಮೇಲೆ ಹಲ್ಲೆ ಮಾಡಿದ ರಿಷಿಕಾ ವಿರುದ್ಧವೂ ಸಂಧ್ಯಾ ಆಯೋಗದ ಮೆಟ್ಟಿಲೇರಿದ್ದಾರೆ.
ಒಟ್ಟಾರೆ, ಬಿಗ್ ಬಾಸ್ ಮನೆ ಮೇಲೆ ಯಾವ ಗ್ರಹಚಾರಿ ಪರಿಣಾಮ ಬೀರಿದೆಯೋ ಗೊತ್ತಿಲ್ಲ, ಆದರೆ ದಿನ ಕಳೆದಂತೆ ಹೊಸಹೊಸ ವಿವಾದಗಳು ಮಾತ್ರ ಮೇಲಕ್ಕೆ ಬರುತ್ತಿವೆ. ಈ ಸೀಸನ್ ಮನರಂಜನೆಯಿಗಿಂತ ಜಗಳ ಮತ್ತು ದೂರುಗಳ ಸದ್ದು ಹೆಚ್ಚಿಸಿದೆ.



