ಮದುವೆಯಾಗುವುದಾಗಿ ನಂಬಿಸಿ ಮೋಸ ಮಾಡಿದಲ್ಲದ್ದೆ ತನ್ನಿಂದ 20 ಲಕ್ಷ ರೂಪಾಯಿ ಪಡೆದಿದ್ದಾರೆ ಎಂದು ಆರೋಪಿಸಿ ‘ಪುಷ್ಪ’ ಸಿನಿಮಾದಲ್ಲಿ ನಟಿಸಿದ್ದ ತೆಲುಗು ನಟ ಶ್ರೀತೇಜ್ ವಿರುದ್ಧ ಮಹಿಳೆಯೊಬ್ಬರು ದೂರು ದಾಖಲಿಸಿದ್ದಾರೆ. ಹೈದರಾಬಾದ್ ಪೊಲೀಸ್ ಠಾಣೆಯಲ್ಲಿ ಮಹಿಳೆ ದೂರ ನೀಡಿದ್ದು ಸದ್ಯ ಮಹಿಳೆ ನೀಡಿದ ದೂರಿನ ಆಧಾರದ ಮೇಲೆ ಶ್ರೀತೇಜ್ ನನ್ನು ಬಂಧಿಸಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
‘ಶ್ರೀ ತೇಜ್ ಮದುವೆ ಆಗುವುದಾಗಿ ನಂಬಿಸಿದ್ದರು. ಆದರೆ, ಈಗ ಮದುವೆ ಆಗಲು ಒಪ್ಪುತ್ತಿಲ್ಲ. ನನ್ನಿಂದ ಹಣ ಪಡೆದಿದ್ದಾರೆ. ಅಲ್ಲದೆ ನನಗೆ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ಸಂತ್ರಸ್ತೆ ದೂರು ನೀಡಿದ್ದಾರೆ. ಸದ್ಯ ಕ್ರಿಮಿನಲ್ ಬ್ರ್ಯಾಂಚ್ನವರು ಶ್ರೀ ತೇಜ್ನ ವಿಚಾರಣೆ ಮಾಡುತ್ತಿದ್ದಾರೆ.
ಸಂತ್ರಸ್ತೆ ಏಪ್ರಿಲ್‌ನಲ್ಲಿಯೂ ಶ್ರೀತೇಜ್ ವಿರುದ್ಧ ದೂರು ದಾಖಲಿಸಿದ್ದರು. ಆ ಸಮಯದಲ್ಲಿ ನಟ ಸಂತ್ರಸ್ತೆಯನ್ನು ಪುಸಲಾಯಿಸಿದ್ದ. ಎಲ್ಲಾ ಸಮಸ್ಯೆಗಳನ್ನು ಶೀಘ್ರದಲ್ಲೇ ಪರಿಹರಿಸಲಾಗುವುದು ಎಂದು ಭರವಸೆ ನೀಡಿದ್ದ. ಈ ಕಾರಣಕ್ಕಾಗಿ ಸಂತ್ರಸ್ತೆ ತನ್ನ ದೂರನ್ನು ಹಿಂಪಡೆದಿದ್ದರು. ಆದರೆ ಶ್ರೀತೇಜ್ ಬದಲಾಗದ ಕಾರಣ ಮತ್ತೆ ದೂರು ನೀಡಿದ್ದಾರೆ.
ಪುಷ್ಪ ಸಿನಿಮಾ ತಂಡದ ವಿರುದ್ಧ ಪದೇ ಪದೇ ಇಂಥ ಆರೋಪಗಗಳೇ ಕೇಳಿ ಬರ್ತಿದೆ. ಜಾನಿ ಮಾಸ್ಟರ್ ವಿರುದ್ದ ಪೋಕ್ಸೋ ಕಾಯ್ದೆ ದಾಖಲಾಗಿದ್ದು ಜೈಲಿಗೆ ಹೋಗಿ ಬಂದಿದ್ದರು. ಬಳಿಕ ‘ಪುಷ್ಪ’ ಚಿತ್ರದಲ್ಲಿ ಅಲ್ಲು ಅರ್ಜುನ್ ಗೆಳೆಯನ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಜಗದೀಶ್ ಅವರು ಅರೆಸ್ಟ್ ಆಗಿದ್ದರು. ಜೂನಿಯರ್ ಆರ್ಟಿಸ್ಟ್ ಆತ್ಮಹತ್ಯೆ ಪ್ರಕರಣದಲ್ಲಿ ಅವರು ಜೈಲು ಸೇರಿದ್ದರು. ಈ ಬೆನ್ನಲ್ಲೇ ಸಿನಿಮಾ ತಂಡದ ಮತ್ತೋರ್ವ ಕಲಾವಿದ ಬಂಧನಕ್ಕೆ ಒಳಗಾಗಿದ್ದಾರೆ. ಬ್ಯಾಕ್ ಟು ಬ್ಯಾಕ್ ಆರೋಪಗಳು ಎದುರಾಗುತ್ತಿರುವುದರಿಂದ ಪುಷ್ಪಚಿತ್ರತಂಡಕ್ಕೆ ಮುಜುಗರ ಎದುರಾಗಿದೆ.