ಜಗತ್ತಿಗೆ ಶಾಂತಿ, ನೆಮ್ಮದಿ ಬೇಕಾಗಿದೆ : ಜಗನ್ನಾಥ ನಾಡಿಗೇರ

0
Concluding ceremony of Akhand Bhajan program
Spread the love

ವಿಜಯಸಾಕ್ಷಿ ಸುದ್ದಿ, ಧಾರವಾಡ : ಭಗವಾನ್ ಶ್ರೀ ಸತ್ಯಸಾಯಿ ಅವರ ಮಾನವೀಯ ಮೌಲ್ಯಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದರ ಮೂಲಕ ನಾವು ನಮ್ಮ ಜೀವನವನ್ನು ಪಾವನಗೊಳಿಸಬಹುದು ಎಂದು ಕರ್ನಾಟಕ ರಾಜ್ಯ ಶ್ರೀ ಸತ್ಯಸಾಯಿ ಸಂಸ್ಥೆಯ ಪ್ರತಿನಿಧಿ, ದಾವಣಗೆರೆಯ ಜಗನ್ನಾಥ ನಾಡಿಗೇರ ಹೇಳಿದರು.

Advertisement

ಧಾರವಾಡದ ಸಪ್ತಾಪುರದಲ್ಲಿ ಶ್ರೀ ಸಾಯಿ ಚರಣ ಆವರಣದಲ್ಲಿ 24 ಗಂಟೆಗಳ ಅಖಂಡ ಭಜನಾ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿ, 1944ರಲ್ಲಿ ಭಗವಾನರ ಆಶೀರ್ವಾದದೊಂದಿಗೆ ಈ ಅಖಂಡ ಭಜನೆಯು ಪ್ರಾರಂಭವಾಯಿತು. ಪ್ರಪಂಚದಾದ್ಯಂತ 135 ರಾಷ್ಟçಗಳಲ್ಲಿ ಭಾರತೀಯ ಕಾಲಮಾನಕ್ಕೆ ಅನುಗುಣವಾಗಿ ಪ್ರತಿ ವರ್ಷ ನವೆಂಬರ್ ಎರಡನೆಯ ಶನಿವಾರ ಸಂಜೆ 6 ಗಂಟೆಯಿಂದ ರವಿವಾರ ಸಂಜೆ 6 ಗಂಟೆವರೆಗೆ ನಿರಂತರವಾಗಿ 24 ಗಂಟೆಗಳವರೆಗೆ ಭಜನಾ ಕಾರ್ಯಕ್ರಮ ನಡೆದುಬರುತ್ತಿದೆ ಎಂದು ಹೇಳಿದರು.

ಇಂದು ಜಗತ್ತಿಗೆ ಶಾಂತಿ, ಸಹನೆ, ನೆಮ್ಮದಿ ಬೇಕಾಗಿದೆ. ಭಗವಾನರ ತತ್ವಗಳ ಮೂಲಕ ನಾವು ಅವುಗಳನ್ನು ಹೇಗೆ ಪಡೆಯಬಹುದು ಹಾಗೂ ಭಗವಾನರು ತಮ್ಮ ಜೀವನವೇ ಒಂದು ಸಂದೇಶ ಎಂದು ತೋರಿಸಿದ ನಾಮಸ್ಮರಣೆ ಮತ್ತು ಸೇವೆ ಎಂಬ ಎರಡು ಸಾಧನಗಳು ಮನಸ್ಸನ್ನು ಆಧ್ಯಾತ್ಮಿಕವಾಗಿ ಹೇಗೆ ಉನ್ನತ ಸ್ಥಾನಕ್ಕೆ ಕೊಂಡೊಯ್ಯುತ್ತವೆ ಎಂದು ನೆರೆದಿದ್ದ ಶ್ರೀಸಾಯಿ ಭಕ್ತರಿಗೆಲ್ಲ ಮನಮುಟ್ಟುವಂತೆ ವಿವರಿಸಿದರು.

ಕಾರ್ಯಕ್ರಮದಲ್ಲಿ ನಿವೃತ್ತ ಹಿರಿಯ ಐಎಎಸ್ ಅಧಿಕಾರಿಗಳಾದ ಅಶೋಕ ದಳವಾಯಿ ಉಪಸ್ಥಿತರಿದ್ದರು. ಸಮಿತಿ ಕನ್ವಿನರ್ ಡಾ.ರಾಜು ರೋಖಡೆ ಸ್ವಾಗತಿಸಿದರು. ಗೋಪಾಲ ಕುಲಕರ್ಣಿ ವಂದಿಸಿದರು. ಶ್ರೀ ಸತ್ಯಸಾಯಿ ಶಾಲಾ-ಕಾಲೇಜು ವಿದ್ಯಾರ್ಥಿನಿಯರು, ಸಿಬ್ಬಂದಿ ವರ್ಗ ಹಾಗೂ ಶ್ರೀ ಸತ್ಯಸಾಯಿ ಸದ್ಭಕ್ತರು ಪಾಲ್ಗೊಂಡಿದ್ದರು.


Spread the love

LEAVE A REPLY

Please enter your comment!
Please enter your name here