ಅಂಬೇಡ್ಕರ್ ವಿರೋಧಿ ಹೇಳಿಕೆಗೆ ಖಂಡನೆ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ಅವರ ಡಾ. ಅಂಬೇಡ್ಕರ್ ವಿರೋಧಿ ಹೇಳಿಕೆಯನ್ನು ಖಂಡಿಸಿ ದ.ಸಂ.ಸ. ಒಕ್ಕೂಟ ದಲಿತ ಪ್ರಗತಿಪರ ಸಂಘಟನೆಗಳು ಗದಗ ನಗರದ ಗಾಂಧಿ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.

Advertisement

ದಲಿತ ಮುಖಂಡ ಬಸವರಾಜ್ ಎಂ.ಕಡೇಮನಿ ಮಾತನಾಡಿ, ಸೂರ್ಯ-ಚಂದ್ರರು ಇರುವವರೆಗೂ ಡಾ. ಬಿ.ಆರ್. ಅಂಬೇಡ್ಕರ್ ಕೊಟ್ಟ ಸಂವಿಧಾನವನ್ನು ಸರಿ ಕಾಪಾಡುವ ಜವಾಬ್ದಾರಿ ನಮ್ಮೆಲ್ಲರದು ಎಂದು ಹೇಳಿದರು.

ಶರೀಫ ಬಿಳಿಯಲಿ, ರಮೇಶ ಚಲವಾದಿ ಮಾತನಾಡಿ, ಕೇಂದ್ರ ಗೃಹ ಸಚಿವರು ಅಜ್ಞಾನದಿಂದ ಮಾತನಾಡಿ ದಲಿತ ವಿರೋಧಿ, ಅಂಬೇಡ್ಕರ ವಿರೋಧಿ ಎಂದು ತಮ್ಮನ್ನು ತಾವು ತೋರಿಸಿಕೊಟ್ಟಿದ್ದಾರೆ ಎಂದರು.

ಅಶೋಕ ಬರಗುಂಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ಸಂಘಟನೆಗಳ ಪ್ರಮುಖರಾದ ಬಾಲರಾಜ ಅರಬರ, ನಾಗರಾಜ ಗೋಕಾವಿ, ಚಂದ್ರಕಾಂತ ಚವ್ಹಾಣ, ರಮೇಶ ಕಡೇಮನಿ, ವಿರುಪಾಕ್ಷ ರಾಮಗಿರಿ, ಆನಂದ ಸಿಂಗಾಡಿ, ಮಲಕಪ್ಪ ಕಾಳೆ, ಮಂಜುನಾಥ ಮುಳಗುಂದ, ಯೂಸೂಫ ನಮಾಜಿ, ವಿನಾಯಕ ಬಳ್ಳಾರಿ, ಮುತ್ತು ಬಿಳೆಯಲಿ, ಪರಮೇಶ ಕಾಳೆ, ಕೆಂಚಪ್ಪ ಮ್ಯಾಗೇರಿ, ಮುತ್ತಪ್ಪ ಭಜಂತ್ರಿ, ಮಾರುತಿ ಅಂಗಡಿ, ಸಂತೋಷ ಬಣಕಾರ, ಶ್ರೀಕಾಂತ ಮಳಲಿ, ಮಂಜು ಚಲವಾದಿ, ಪೂಜಾ ಬೇವೂರ, ಗಣೇಶ ಹುಬ್ಬಳ್ಳಿ, ಶಿವು ತಮ್ಮಣ್ಣವರ, ಡಿ.ಎಲ್. ಬಣಕಾರ, ಗುರಪ್ಪ ಬಿಳೆಯಲಿ, ಅನಿಲ ಕಾಳೆ, ಪರಶುರಾಮ ಬಿಳೆಯಲಿ, ಹೊನ್ನಪ್ಪ ಸಾಕಿ, ಲಕ್ಷ್ಮಣ ವಡ್ಡರಕಲ್ಲ, ಶಾಕೀರ ಕಾತರಗಿ, ಶಾರುಖ ಹುಯಿಲಗೋಳ, ಶೌಕತಅಲಿ ಕಾತರಕಿ, ಮುನ್ನಾ ಮುಲ್ಲಾನವರ ಮುಂತಾದವರಿದ್ದರು.


Spread the love

LEAVE A REPLY

Please enter your comment!
Please enter your name here