ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಮುಂಬೈ ಹಾಗೂ ಗುಜರಾತ್ ಎಟಿಎಸ್ ಪೊಲೀಸರು ಮುಸ್ಲಿಂ ಸಮಾಜದ ಧರ್ಮ ಗುರುಗಳಾದ ಮೌಲಾನಾ ಮುಪ್ತಿ ಸಲ್ಮಾನ್ ಅಜಹರಿ ಅವರ ಮೇಲೆ ಸುಳ್ಳು ಆರೋಪಗಳನ್ನು ಹೊರಿಸಿ ಬಂಧಿಸಿರುವ ಕ್ರಮ ಖಂಡನೀಯವಾಗಿದೆ ಎಂದು ವೀರ ಕನ್ನಡಿಗ ಟಿಪ್ಪು ಸೇನೆ ಅಧ್ಯಕ್ಷ ಜಾಕೀರಹುಸೇನ ಹವಾಲ್ದಾರ ಹೇಳಿದರು.
ಅವರು ಪಟ್ಟಣದ ದೂದ್ ನಾನಾ ದರ್ಗಾದಿಂದ ವೀರ ಕನ್ನಡಿಗ ಟಿಪ್ಪು ಸೇನೆ ನೇತೃತ್ವದಲ್ಲಿ ಪಟ್ಟಣದ ಮುಸ್ಲಿಂ ಸಮಾಜದ ಬಾಂಧವರೊಂದಿಗೆ ಪ್ರಮುಖ ಮಾರ್ಗದಲ್ಲಿ ಖಂಡನಾ ಮೆರವಣಿಗೆ ನಡೆಸಿ ಬಸ್ ನಿಲ್ದಾಣದ ಹತ್ತಿರ ಪ್ರತಿಭಟನೆ ಉದ್ದೇಶಿಸಿ ಮಾತನಾಡಿದರು.
ಅಂಜುಮನ್ ಏ-ಇಸ್ಲಾಂ ಸಮಿತಿ ಅಧ್ಯಕ್ಷ ಮುಕ್ತಾರಅಹ್ಮದ ಗದಗ, ಪುರಸಭೆ ಸದಸ್ಯ ಸಾಹೇಬಜಾನ್ ಹವಾಲ್ದಾರ ಮಾತನಾಡಿ, ಮೌಲಾನಾ ಮುಪ್ತಿ ಸಲ್ಮಾನ ಅಜಹರಿ ಅವರ ಮೇಲಿನ ಸುಳ್ಳು ಪ್ರಕರಣ ರದ್ದುಪಡಿಸಿ ಅವರನ್ನು ತಕ್ಷಣ ಬಿಡುಗಡೆಗೊಳಿಸಬೇಕು. ಅವರ ಬಂಧನ ಅಸಂವಿಧಾನಿಕ ಕ್ರಮವಾಗಿದ್ದು, ಅಲ್ಪಸಂಖ್ಯಾತ ಮುಸ್ಲಿಂ ಸಮಾಜ ಬಾಂಧವರು ಇದನ್ನು ಖಂಡಿಸುವದಾಗಿ ಹೇಳಿದರು.
ಗ್ರೇಡ್-೨ ತಹಸೀಲ್ದಾರ ಮಂಜುನಾಥ ಆಮಾಸಿ ಮನವಿ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಅಂಜುಮನ್ ಸಂಸ್ಥೆಯ ಉಪಾಧ್ಯಕ್ಷ ಕರಿಮಸಾಬ ಸೂರಣಗಿ, ಯುನೂಸ ಚೌರಿ, ಮೌಲಾಗಳಾದ ಉಸ್ಮಾನ ಆಶರಪೆಸಾದಿಕ ಜಮಖಂಡಿ, ಖಯ್ಯಮ ಹಜರತ್, ಅಭು ಹಜರತ್, ಉಸ್ಮಾನ ಹಜರತ್, ಶಕೀಲ ಹಜರತ್, ಶಪಿಕ ಸಿದ್ದಾಪುರ, ದಾದಾಪೀರ ಡಾಲಾಯತ್, ಹಜರತ್ ಪಟೇಲ್ ಕನಕವಾಡ, ಇರ್ಷಾದ ಕಿತ್ತೂರ, ಶೋಕತ್ ಹೆಸರೂರ, ಸಾಧಿಕ್ ಟಿಪ್ಪು ಮಹಮದಅಲಿ, ಮುಸ್ತಾಕ ಸೇರಿದಂತೆ ಪಟ್ಟಣದ ನೂರಾರು ಮುಸ್ಲಿಂ ಬಾಂಧವರು ಉಪಸ್ಥಿತರಿದ್ದರು.