ಪತ್ರಕರ್ತ ರಾಮಾಂಜಿನಪ್ಪ ಮೇಲಿನ ಹಲ್ಲೆಗೆ ಖಂಡನೆ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ಜಿಲ್ಲೆಯ ಕಾರ್ಯನಿರತ ಪತ್ರಕರ್ತರ ಸಂಪಾದಕರ ಸಂಘದಿಂದ ಗುರುವಾರ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.

Advertisement

ಅಕ್ರಮ ದಂಧೆಗಳ ಕುರಿತು ದಿಟ್ಟತನದಿಂದ ವರದಿ ಮಾಡಿದ್ದ ರಾಮಾಂಜಿನಪ್ಪ ಪಾವಗಡ ತಾಲೂಕಿನಲ್ಲಿ ಸಂಚಲನ ಮೂಡುವಂತೆ ಮಾಡಿದ್ದರು. ತಾಲೂಕಿನ ಪ್ರತಿಯೊಂದು ಸಮಸ್ಯೆಗಳ ಬಗ್ಗೆ, ಕೆಲವು ಮಾಫಿಯಾಗಳ ಬಗ್ಗೆ, ದಿಟ್ಟ ವರದಿಗಳನ್ನು ಬರೆಯುತ್ತಿದ್ದರು. ಪಾವಗಡ ನಗರದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಸಂಪಾದಕ ರಾಮಾಂಜಿನಪ್ಪನವರ ಮೇಲೆ ನಡೆದಿರುವ ದೌಜನ್ಯ ಖಂಡನೀಯ. ತಮ್ಮ ಕರ್ತವ್ಯ ಮೀರಿ ರಾಜಕಾರಣಿಯ ಬಗೆ ವರದಿ ಮಾಡಿದ್ದರೆ ಅವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ಅವಕಾಶ ಇತ್ತು. ಆದರೆ ಯಾವುದೋ ಒಂದು ವರದಿಯನ್ನು ನೆಪ ಮಾಡಿಕೊಂಡು ಅವರ ಮೇಲೆ ಹಲ್ಲೆ ನಡೆಸಿರುವುದನ್ನು ಸಂಘವು ಖಂಡಿಸಿದೆ.

ರಾಮಾಂಜಿನಪ್ಪ ಅವರಿಗೆ ಸೂಕ್ತ ರಕ್ಷಣೆ ನೀಡಬೇಕಾಗಿದೆ. ಕೆಲ ಕಿಡಿಗೇಡಿಗಳಿಂದ ನಿಷ್ಠಾವಂತ ಸಂಪಾದಕ ಹಾಗೂ ಪತ್ರಕರ್ತರ ಆತ್ಮಸ್ಥೆರ್ಯ ಕುಗ್ಗಿಸುವಂತ ಪ್ರಯತ್ನ ನಡೆಯುತ್ತಿದೆ. ಗೃಹ ಸಚಿವರು ತಮ್ಮ ತವರು ಜಿಲ್ಲೆಯಲ್ಲಿ ನಡೆದಿರುವ ಘಟನೆ ನಾಗರಿಕ ಸಮಾಜ ತಲೆತಗ್ಗಿಸುವ ವಿಚಾರ ಎಂಬುದನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ಕ್ರಮ ಜರುಗಿಸಬೇಕೆಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ ಅವರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಸಂಘದ ರಾಜ್ಯ ಉಪಾಧ್ಯಕ್ಷ ಮಂಜುನಾಥ ಅಬ್ಬಿಗೇರಿ, ಜಿಲ್ಲಾಧ್ಯಕ್ಷ ಜಗದೀಶ ಎಸ್.ಪಿ, ಜಿಲ್ಲಾ ಉಪಾಧ್ಯಕ್ಷ ನಾಗೋಸಾ ಬಾಂಡಗೆ, ಪ್ರಧಾನ ಕಾರ್ಯದರ್ಶಿ ದೇವಪ್ಪ ಲಿಂಗದಾಳ, ಸದಸ್ಯರಾದ ಅಜಿತ್ ಹೊಂಬಾಳೆ, ಮಲ್ಲಿಕಾರ್ಜುನ ಮಾಳಗಿಮನಿ ಇದ್ದರು.


Spread the love

LEAVE A REPLY

Please enter your comment!
Please enter your name here