ವಿಜಯಸಾಕ್ಷಿ ಸುದ್ದಿ, ಗದಗ: ಭಾರತದ ಸರ್ವೋಚ್ಚ ನ್ಯಾಯಾಲಯದ ಗೌರವಾನ್ವಿತ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ಮೇಲೆ ಬೂಟು ಎಸೆಯಲು ಯತ್ನಿಸಿದ ಸಂವಿಧಾನ ವಿರೋಧಿ ವಕೀಲನ ಕೃತ್ಯ ಖಂಡನೀಯ. ಸಿ.ಜಿ.ಐ ಬಿ.ಆರ್. ಗವಾಯಿ ಅವರು ದಲಿತ ಸಮುದಾಯಕ್ಕೆ ಸೇರಿದ, ಜೀವಪರವಾಗಿ ಚಿಂತಿಸುವ ಘನವ್ಯಕ್ತಿ. ಅವರು ಬಿಜೆಪಿಯ ಬುಲ್ಡೋಜರ್ ನ್ಯಾಯವನ್ನು ವಿರೋಧಿಸಿ ತೀರ್ಪು ನೀಡಿದವರು ಮತ್ತು ಸಂವಿಧಾನದ ಪ್ರಕಾರ ತೀರ್ಪು ನೀಡುವ ಮೂಲಕ ನ್ಯಾಯದ ಪರ ನಿಂತಿದ್ದರು. ಹಾಗಾಗಿ ರಾಕೇಶ ಕಿಶೋರ್ ಎಂಬ ಮನುವಾದಿಯೊಬ್ಬ ಅವರ ಮೇಲೆ ಬೂಟು ಎಸೆಯುವ ಪ್ರಯತ್ನ ಮಾಡಿರುವುದು ಖೇದಾರ್ಹ ಎಂದು ಡಿ.ಎಸ್.ಎಸ್ ಗದಗ ಜಿಲ್ಲಾ ಸಂಘಟನಾ ಸಂಚಾಲಕ ಸತೀಶ ಎಚ್. ಹೂಲಿ ಖಂಡಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ರಾಕೇಶ ಕಿಶೋರ್ ಎಂಬ ಸಂವಿಧಾನ ವಿರೋಧಿ ಈ ವ್ಯಕ್ತಿಯನ್ನು ನಮ್ಮ ದೇಶದಿಂದ ಗಡಿಪಾರು ಮಾಡಲು ಸರ್ಕಾರ ಕ್ರಮ ಕೈಗೊಳ್ಳಬೇಕು. ಈ ದೇಶದ ಸರ್ವೋಚ್ಚ ನ್ಯಾಯಾಧೀಶರಿಗೆ ಈ ರೀತಿ ಆಗುತ್ತದೆ ಎಂದರೆ ಜಾತಿ, ಚತುರ್ವರ್ಣ ಪದ್ಧತಿ ಯಾವ ರೀತಿ ಕೆಲಸ ಮಾಡುತ್ತದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕಿದೆ ಎಂದಿದ್ದಾರೆ.