ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಕನ್ನಡದ ಖ್ಯಾತ ಕಾದಂಬರಿಕಾರ ಎಸ್.ಎಲ್. ಭೈರಪ್ಪನವರು ಬುಧವಾರ ನಿಧನರಾಗಿದ್ದು, ಅವರ ನಿಧನಕ್ಕೆ ತಾಲೂಕಿನ ಸಾಹಿತಿಗಳು, ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ.
ಮಾಜಿ ಶಾಸಕ ಜಿ.ಎಸ್. ಗಡ್ಡದೇವರಮಠ, ಜಿ.ಎಂ. ಮಹಾಂತಶೆಟ್ಟರ, ಶಾಸಕ ಡಾ. ಚಂದ್ರು ಲಮಾಣಿ, ಸಾಹಿತಿಗಳಾದ ಪೂರ್ಣಾಜಿ ಖರಾಟೆ, ಸಿ.ಜಿ. ಹಿರೇಮಠ, ಬಿ.ಎಸ್. ಬಾಳೇಶ್ವರಮಠ, ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಘಟಕದ ಅಧ್ಯಕ್ಷ ಈಶ್ವರ ಮೆಡ್ಲೇರಿ, ಆರ್.ಎನ್. ನವಲೆ, ಕಸಾಪ ಶಿಗ್ಲಿ ಗ್ರಾಮ ಘಟಕದ ಗೌರವಾಧ್ಯಕ್ಷ ಪ್ರವೀಣ ಹುಲಗೂರ, ತಾಲೂಕು ಮಕ್ಕಳ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಗರಾಜ ಹಣಗಿ, ತಾಲೂಕು ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಲ್.ಎಸ್. ಅರಳಹಳ್ಳಿ, ಕೆ.ಎಸ್. ಕೊಡ್ಲಿವಾಡ, ಬಿ.ಎಸ್. ಹೆಬ್ಬಾಳ, ಜಿ.ಎಸ್. ರಾಮಶೆಟ್ಟರ್, ಎಸ್.ಎಫ್. ಆದಿ, ಹಿರಿಯ ಮಹಿಳಾ ಸಾಹಿತಿಗಳಾದ ಜಯಲಕ್ಷ್ಮೀ ಗಡ್ಡದೇವರಮಠ, ಲಲಿತಕ್ಕ ಕೆರಿಮನಿ, ಮೈತ್ರಾದೇವಿ ಹಿರೇಮಠ, ನಿರ್ಮಲಾ ಶೆಟ್ಟರ್, ಡಾ. ಜಯಶ್ರೀ ಕೋಲಕಾರ ಹಾಗೂ ತಾಲೂಕಾ ಕಾರ್ಯನಿರತ ಪತ್ರಕರ್ತರ ಸಂಘ, ಕಸಾಪ, ಕರವೇ ಪದಾಧಿಕಾರಿಗಳು ಸಂತಾಪ ಸೂಚಿಸಿದ್ದಾರೆ.