ವಿಜಯಸಾಕ್ಷಿ ಸುದ್ದಿ, ಗದಗ : ಅಂಜುಮನ್ ಸಂಸ್ಥೆಯ ಚುನಾವಣೆಯನ್ನು ಪ್ರತಿ ಮೂರು ವರ್ಷಕ್ಕೊಮ್ಮೆ ನಡೆಸಬೇಕು. ಆದರೆ ಕಳೆದ ಹಲವು ವರ್ಷಗಳಿಂದ ಸಂಸ್ಥೆಯ ಚುನಾವಣೆ ನಡೆದಿಲ್ಲ. ಕೊನೆಯ ಚುನಾವಣೆ 2009ರಲ್ಲಿ ನಡೆದಿದ್ದು, ಮುಂದೆ ಪ್ರತಿ ಮೂರು ವರ್ಷಗಳ ಅವಧಿಗೆ ಚುನಾವಣೆ ನೆಡದಿಲ್ಲ. ಗದಗ ಜಿಲ್ಲೆಯ ತಾಲೂಕು, ಗ್ರಾಮೀಣ ಅಂಜುಮನ್ ಸಂಸ್ಥೆಗಳ ಚುನಾವಣೆಗಳು ನಡೆಯುತ್ತಿದ್ದರೂ ಗದಗ-ಬೆಟಗೇರಿ ಅಂಜುಮನ್ ಇಸ್ಲಾಂ ಸಂಸ್ಥೆಯ ಚುನಾವಣೆಯನ್ನು ನಡೆಯುತ್ತಿಲ್ಲ.
ಗದಗ-ಬೆಟಗೇರಿ ಸಮಾಜದ ಅಭಿವೃದ್ಧಿಗಾಗಿ ಆದಷ್ಟು ಬೇಗ ಗದಗ-ಬೆಟಗೇರಿ ನಗರದ ಅಂಜುಮನ್ ಏ ಇಸ್ಲಾಂ ಸಂಸ್ಥೆಗೆ ಚುನಾವಣೆ ನಡೆಸಬೇಕೆಂದು ಜೈ ಹೋ ಕರ್ನಾಟಕ ಪರಿವರ್ತನ ವೇದಿಕೆಯ ಗದಗ ಜಿಲ್ಲಾಧ್ಯಕ್ಷ ರಫೀಕ ಧಾರವಾಡ ಪತ್ರಿಕಾ ಪ್ರಕಟಣೆಯ ಮೂಲಕ ಆಗ್ರಹಿಸಿದ್ದಾರೆ.



