ಬೆಳಗಾವಿ: ಮರಾಠಿ ಯುವಕರ ಗೂಂಡಾಗಿರಿ ರಾಜ್ಯದಲ್ಲಿ ತಲೆ ಎತ್ತಿದಿಯಾ ಅನ್ನೋ ಅನುಮಾನ ಕಾಡಿದೆ. ಕನ್ನಡ ಮಾತಾಡು ಅಂದಿದ್ದಕ್ಕೆ ಕಂಡಕ್ಟರ್ ಮೇಲೆ ಹಲ್ಲೆ ಮಾಡಿರುವ ಘಟನೆ ನಡೆದಿದೆ. ಬೆಳಗಾವಿ ತಾಲೂಕಿನ ಸುಳೇಬಾವಿ, ಬಾಳೇಕುಂದ್ರಿ ಗ್ರಾಮ ಮಧ್ಯೆ ಗಲಾಟೆ ನಡೆದಿದೆ.
Advertisement
ಮಹದೇವ ಹಲ್ಲೆಗೊಳಗಾದ ಸರ್ಕಾರಿ ಬಸ್ ಕಂಡಕ್ಟರ್. ಬೆಳಗಾವಿಯ ಮಾರಿಹಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಕಂಡಕ್ಟರ್ ಮಹದೇವಗೆ ಟಿಕೆಟ್ ಕೊಡುವಂತೆ ಯುವತಿ ಮರಾಠಿಯಲ್ಲಿ ಕೇಳಿದ್ದಾಳೆ. ಯುವತಿ ಜೊತೆ ಯುವಕ ಪ್ರಯಾಣ ಮಾಡುತ್ತಿದ್ದರಿಂದ 2 ಟಿಕೆಟ್ ಕೇಳಿದ್ದಳು.
ನನಗೆ ಮರಾಠಿ ಬರಲ್ಲ, ಕನ್ನಡದಲ್ಲಿ ಮಾತನಾಡಿ ಎಂದು ಕಂಡಕ್ಟರ್ ಮಹದೇವ ಹೇಳಿದ್ದಾರೆ. ಇಷ್ಟಕ್ಕೆ ಜನರನ್ನು ಕರೆಸಿ ಚಲಿಸುತ್ತಿರುವ ಬಸ್ ನಿಲ್ಲಿಸಿ ಕಂಡಕ್ಟರ್ಗೆ ಹಲ್ಲೆ ಮಾಡಲಾಗಿದೆ. ಸದ್ಯ ಹಲ್ಲೆಗೊಳಗಾದ ಬಸ್ ಕಂಡಕ್ಟರ್ಗೆ ಬೆಳಗಾವಿ ಬಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.