ಕಲಬುರ್ಗಿ: ಜಿಲ್ಲೆಯ ಫರಹತಾಬಾದ್ ಬಳಿ ಚಲಿಸುತ್ತಿದ್ದ ಸಾರಿಗೆ ಬಸ್ನಲ್ಲೇ ಹೃದಯಾಘಾತದಿಂದ ಕಂಡಕ್ಟರ್ ಸಾವನ್ನಪ್ಪಿದ ಘಟನೆ ಜರುಗಿದೆ.
Advertisement
50 ವರ್ಷದ ಕಾಶೀನಾಥ್ ಮೃತ ಕಂಡಕ್ಟರ್. ಇವರು ಯಡ್ರಾಮಿ ತಾಲೂಕಿನ ಜವಳಗಾ ಗ್ರಾಮದವರಾಗಿದ್ದಾರೆ. ಕಲಬುರಗಿಯಿಂದ ಜೇವರ್ಗಿಗೆ ಬಸ್ ಹೊರಟಿತ್ತು. ಈ ವೇಳೆ ಫರಹತಾಬಾದ್ ಬಳಿ ಏಕಾಏಕಿಯಾಗಿ ಅವರು ಕುಸಿದು ಬಿದ್ದಿದ್ದಾರೆ. ತಕ್ಷಣ ಚಾಲಕ ಹಾಗೂ ಪ್ರಯಾಣಿಕರು ಸೇರಿ ಬಸ್ನಲ್ಲೇ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾರೆ. ಅಷ್ಟರಲ್ಲಾಗಲೇ ಅವರು ಸಾವನ್ನಪ್ಪಿದ್ದಾರೆ.
ಫರಹತಾಬಾದ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.