ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಅಡ್ರಕಟ್ಟಿ ಗ್ರಾಮದ ವಾರ್ಡ್ ನಂ. 1ರಲ್ಲಿ ಗಣತಿದಾರರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಎಂ.ಎಸ್. ಹಿರೇಮಠ ಸಾಮಾಜಿಕ ಜಾಲತಾಣದಲ್ಲಿ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯ ಕುರಿತು ವ್ಯಾಪಕ ಪ್ರಚಾರ ಮಾಡಿ ಜಾಗೃತಿ ಮೂಡಿಸುತ್ತಿರುವುದಕ್ಕೆ ಅಡ್ರಕಟ್ಟಿ ಗ್ರಾ.ಪಂ ಆಡಳಿತ ಅಧಿಕಾರಿಗಳು, ಅಧ್ಯಕ್ಷರು, ಸದಸ್ಯರು ಅಭಿನಂದಿಸಿದರು.
ಗಣತಿ ಪ್ರಾರಂಭಕ್ಕೂ ಮೊದಲು ಸಮೀಕ್ಷೆ ಹೇಗೆ ಇರುತ್ತದೆ, ಸಮೀಕ್ಷೆಗೆ ಬಂದಾಗ ಯಾವ ಯಾವ ದಾಖಲೆಗಳನ್ನು ತೋರಿಸಬೇಕು, ಯಾವ ಯಾವ ಪ್ರಶ್ನೆಗಳನ್ನು ಕೇಳುತ್ತಾರೆ ಎಂದು ನಿತ್ಯವೂ ವಾಟ್ಸಪ್, ಸ್ಟೇಟಸ್, ಫೇಸ್ಬುಕ್‌ನಲ್ಲಿ ಹಾಗೂ ತಾವು ಕರ್ತವ್ಯ ನಿರ್ವಹಿಸುತ್ತಿರುವ ಕೊಂಡಿಕೊಪ್ಪ ಗ್ರಾಮದ ಎಸ್‌ಡಿಎಂಸಿ ಅಧ್ಯಕ್ಷರು, ಸದಸ್ಯರಿಗೆ ವೈಯಕ್ತಿಕವಾಗಿ ತಿಳಿಸಿದ್ದಾರೆ.
ಸಮೀಕ್ಷೆಗೆ ಮೊದಲು ಹಾಗೂ ಸಮೀಕ್ಷೆ ನಡೆಯುತ್ತಿರುವಾಗ ಎಲ್ಲರೊಂದಿಗೆ ಬೆರೆತು ಸರಿಯಾದ ರೀತಿಯಲ್ಲಿ ಗಣತಿ ನಡೆಯುವಂತೆ ನೋಡಿಕೊಂಡಿದ್ದಾರೆ. ಇವರ ಕಾರ್ಯಕ್ಕೆ ಗ್ರಾ.ಪಂ ಅಧ್ಯಕ್ಷರಾದ ಪಿ.ಎಮ್. ಲಮಾಣಿ, ಅಭಿವೃದ್ಧಿ ಅಧಿಕಾರಿಗಳಾದ ಪ್ರಶಾಂತ ಮಾಡಳ್ಳಿ, ಕಾರ್ಯದರ್ಶಿ ಎಸ್.ಕೆ. ಡಂಬಳ, ಮೇಲ್ವಿಚಾರಕರಾದ ಸಿ.ವಿ. ವಡಕಣ್ಣವರ ಅಭಿನಂದನೆಗಳನ್ನು ತಿಳಿಸಿದ್ದಾರೆ.