ವಿಜಯಸಾಕ್ಷಿ ಸುದ್ದಿ, ಗದಗ : ನವೆಂಬರ್ 2 ಮತ್ತು 3ರಂದು ಮೈಸೂರಿನಲ್ಲಿ ನಡೆದ 15ನೇ ರಾಜ್ಯ ಮಟ್ಟದ ರೋಡ್ ಸೈಕ್ಲಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಗದಗ ಜಿಲ್ಲೆಯ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಕ್ರೀಡಾ ವಸತಿ ನಿಲಯದ ವಿದ್ಯಾರ್ಥಿ ನಿಖಿಲ್‌ರಡ್ಡಿ ನಿಂಗರಡ್ಡಿ ತೇರಿನಗಡ್ಡಿ 14 ವರ್ಷ ವಯೋಮಿತಿ ಒಳಗಿನ ಬಾಲಕರ Time Trile ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಪಡೆದು ಓಡಿಸ್ಸಾದಲ್ಲಿ ನಡೆಯುವ 29ನೇ ರಾಷ್ಟç ಮಟ್ಟದ ರೋಡ್ ಸೈಕ್ಲಿಂಗ್ ಚಾಂಪಿಯನ್‌ಶಿಪ್‌ಗೆ ಕರ್ನಾಟಕದಿಂದ ಪ್ರತಿನಿಧಿಸಲು ಆಯ್ಕೆಯಾಗಿದ್ದಾರೆ.
ಸಾಧಕ ಸೈಕ್ಲಿಂಗ್ ಕ್ರೀಡಾಪಟು ನಿಖಿಲ್‌ರಡ್ಡಿ ನಿಂಗರಡ್ಡಿ ತೇರಿನಗಡ್ಡಿ ಹಾಗೂ ಖೇಲೋ ಇಂಡಿಯಾ ಸೈಕ್ಲಿಂಗ್ ತರಬೇತುದಾರ ನಿಂಗರಡ್ಡಿ ತೇರಿನಗಡ್ಡಿ ಇವರಿಗೆ ಜಿಲ್ಲಾಧಿಕಾರಿ ಗೋವಿಂದರೆಡ್ಡಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಡಾ. ಶರಣು ಗೋಗೇರಿ ಹಾಗೂ ಗದಗ ಜಿಲ್ಲಾ ಅಮೆಚ್ಯೂರ್ ಸೈಕ್ಲಿಂಗ್ ಅಸೋಸಿಯೇಶನ್ ಪದಾಧಿಕಾರಿಗಳು ಅಭಿನಂದನೆ ಸಲ್ಲಿಸಿದ್ದಾರೆ.