HomeGadag News`ಸಿಂಧೂರ’ದ ಸೈನಿಕರಿಗೆ ಅಭಿನಂದನೆ

`ಸಿಂಧೂರ’ದ ಸೈನಿಕರಿಗೆ ಅಭಿನಂದನೆ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಭಾರತೀಯ ಮಹಿಳೆಯರ ಸಿಂಧೂರವನ್ನು ಅಳಿಸಿ ಹಾಕಿದ ನರಹಂತಕ ಉಗ್ರರ ವಿರುದ್ಧ ಅದೇ ಸಿಂಧೂರದ ಹೆಸರಿನಲ್ಲಿ ಪ್ರತೀಕಾರದ ಕ್ರಮವನ್ನು ಕೈಗೊಂಡು ಯಶಸ್ವಿಯಾಗಿರುವ ಭಾರತೀಯ ಸೈನಿಕರಿಗೆ ಇಲ್ಲಿನ ಬ್ರಹ್ಮ ಸಮಾಜ ಹೃತ್ಪೂರ್ವಕವಾದ ಅಭಿನಂದನೆಯನ್ನು ಸಲ್ಲಿಸಿತು.

ಪಟ್ಟಣದ ಶ್ರೀ ದತ್ತಾತ್ರೇಯ ದೇವಸ್ಥಾನದಲ್ಲಿ ಶ್ರೀ ದತ್ತಭಕ್ತ ಮಂಡಳಿಯ ಅಧ್ಯಕ್ಷ ಡಾ. ನಾಗರಾಜ ಗ್ರಾಮಪುರೋಹಿತ ಅವರ ಅಧ್ಯಕ್ಷತೆಯಲ್ಲಿ ಸಭೆ ಸೇರಿದ್ದ ಬ್ರಹ್ಮ ಸಮಾಜವು ಸೈನಿಕರಿಗೆ ಇನ್ನಷ್ಟು ಬಲವನ್ನು ತುಂಬಲು ಶ್ರೀ ದತ್ತಾತ್ರೇಯನಲ್ಲಿ ಪ್ರಾರ್ಥಿಸಿತು.

ರಘುನಾಥ ಕೊಂಡಿ ಮಾತನಾಡಿ, ಉಗ್ರರು ಮನುಷ್ಯತ್ವವನ್ನೇ ಮರೆತ ರಕ್ತ ಪಿಪಾಸುಗಳು. ಅವರಿಗೆ ಬೆಂಬಲ ನೀಡುತ್ತಿರುವ ಪಾಕಿಸ್ತಾನಕ್ಕೆ ಎಂದಿಗೂ ಅಪರಾಧಿ ಮನೋಭಾವ ಕಾಡಿಲ್ಲ. ತನ್ನ ದೇಶದಲ್ಲಿ ಉಗ್ರರಿದ್ದರೆ ಇಡೀ ಜಗತ್ತೇ ತನಗೆ ಹೆದರುತ್ತದೆ ಎಂಬ ಧೋರಣೆಯನ್ನು ಅದು ಎಂದಿನಿಂದಲೂ ಬೆಳೆಸಿಕೊಂಡು ಬಂದಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಪಹಲ್ಗಾಮ ದಾಳಿಯ ನಂತರ ಘೋಷಿಸಿದಂತೆ ಪಾಕಿಸ್ತಾನದ ಮೇಲೆ ಆಪರೇಷನ್ ಸಿಂಧೂರ ನಡೆಸುವ ಮೂಲಕ ಪಾಕಿಸ್ತಾನಕ್ಕೆ ತಕ್ಕ ಉತ್ತರ ಕೊಟ್ಟಿದ್ದಾರೆ. ಅದರ ಸೊಕ್ಕು ಮುರಿಯಬೇಕಾದರೆ ನಮ್ಮ ಸೈನಿಕರು ಪಾಕಿಸ್ತಾನವನ್ನೇ ನಿರ್ನಾಮ ಮಾಡಬೇಕು. ಅಂದರೆ ಜಗತ್ತಿನಲ್ಲಿ ಉಗ್ರವಾದ ನಿಲ್ಲುತ್ತದೆ ಎಂದರು.

ಅರ್ಚಕ ಶ್ರೀವಲ್ಲಭಭಟ್ಟ ಸದರಜೋಷಿ ವಿಶೇಷ ಪೂಜೆ ನೆರವೇರಿಸಿದರು. ಈವೇಳೆ ಶ್ರೀಪಾದಭಟ್ಟ ಜೋಷಿ, ಶ್ರೀಪಾದ ಕುಲಕರ್ಣಿ, ಅರುಣ ಕುಲಕರ್ಣಿ(ಕುರಗಡ್ಡಿ), ಆನಂದ ಕುಲಕರ್ಣಿ, ಮುಕುಂದಭಟ್ಟ ಸೂರಭಟ್ಟನವರ, ನಾಗೇಶಭಟ್ಟ ಗ್ರಾಮಪುರೋಹಿತ, ಪ್ರಶಾಂತ ಗ್ರಾಮಪುರೋಹಿತ, ಅಜಿತ ಕುಲಕರ್ಣಿ, ರಾಮಕೃಷ್ಣ ಸದರಜೋಷಿ, ಅರುಣ ಕುಲಕರ್ಣಿ, ಶೋಭಾ ಕುಲಕರ್ಣಿ, ಅರ್ಚನಾ ಕುಲಕರ್ಣಿ, ಅನಿತಾ ಗ್ರಾಮಪುರೋಹಿತ, ರಾಜಶ್ರೀ ಕುಲಕರ್ಣಿ, ಪರಿಮಳಾ ಗ್ರಾಮಪುರೋಹಿತ, ಪದ್ಮಾ ಕುಲಕರ್ಣಿ, ಪ್ರಭಾ ರಾಯಭಟ್ಟನವರ, ನಿಖಿತಾ ಗ್ರಾಮಪುರೋಹಿತ, ಜ್ಯೋತಿ ನಾಡಿಗೇರ, ರೂಪಾ ಗ್ರಾಮಪುರೋಹಿತ, ಜಯಶ್ರೀ ಗ್ರಾಮಪುರೋಹಿತ, ಸನ್ಮತಿ ಸದರಜೋಷಿ, ವಿಮಲಾಬಾಯಿ ಗ್ರಾಮಪುರೋಹಿತ, ಶಾರದಾಬಾಯಿ ಗ್ರಾಮಪುರೋಹಿತ ಇನ್ನಿತರರಿದ್ದರು.

ಡಾ. ನಾಗರಾಜ ಮಾತನಾಡಿ, ಕೇಂದ್ರದಲ್ಲಿ ಅಧಿಕಾರದಲ್ಲಿರುವ ನರೇಂದ್ರ ಮೋದಿ ಸರಕಾರ ಉಗ್ರರ ಬೆಂಬಲಿಗರಿಗೆ ತಕ್ಕ ಪಾಠವನ್ನು ಕಲಿಸುತ್ತಿದೆ. ಪಹಲ್ಗಾಮ ದಾಳಿಯಲ್ಲಿ ಪಾಲ್ಗೊಂಡ ಆ ನಾಲ್ವರು ಉಗ್ರರನ್ನು ಸದೆಬಡಿಯಬೇಕು. ಅವರಿಂದ ನೊಂದು-ಬೆಂದ ಕುಟುಂಬದವರಿಗೆ ಸಾಂತ್ವನ ನೀಡಬೇಕು ಎಂದರು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!