ದಾವಣಗೆರೆ: ಲಿಕ್ಕರ್ ಶಾಪ್ ನಡೆಸಲು ಬಿಲ್ಡಿಂಗ್ ಬಾಡಿಗೆ ಕೊಡೋಲ್ಲ ಎಂಬ ಕಾರಣಕ್ಕೆ ಚನ್ನಗಿರಿ ಪುರಸಭೆ ಕಾಂಗ್ರೆಸ್ ಸದಸ್ಯ ಶ್ರೀಕಾಂತ್ ಚವ್ಹಾಣ್ ಹಾಗೂ ಆತನ 50 ಸಹಚರರಿಂದ ಬಿಲ್ಡಿಂಗ್ ಮಾಲೀಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ದಾವಣಗೆರೆ ಚನ್ನಗಿರಿ ಪಟ್ಟಣದಲ್ಲಿ ಪೊಲೀಸರ ಮುಂದೆಯೇ ನಡೆದಿದೆ. ಬಿಲ್ಡಿಂಗ್ ಮಾಲೀಕ ರುದ್ರೋಜಿರಾವ್ ಆತನ ಕುಟುಂಬ ಸದಸ್ಯರಾದ ಶ್ವೇತಾ ರಾಹುಲ್ ಶಿವಾಜಿ ಮೇಲೆ ಅಮಾನುಷವಾಗಿ ಹಲ್ಲೆ ಮಾಡಿದ್ದಾರೆ.
ಘಟನೆ ಹಿನ್ನಲೆ
ಚನ್ನಗಿರಿ ಪಟ್ಟಣದ ಬಸ್ ಸ್ಟ್ಯಾಂಡ್ ಸಮೀಪ 3 ಅಂತಸ್ತಿನ ಸ್ವಂತ ಕಟ್ಟಡದ ಮಾಲೀಕತ್ವ ಹೊಂದಿರುವ ರುದ್ರೋಜಿರಾವ್ ಪುರಸಭೆ ಕಾಂಗ್ರೆಸ್ ಸದಸ್ಯನಿಗೆ 3 ಅಂತಸ್ತು ಕಟ್ಟಡದಲ್ಲಿ 2 ಅಂತಸ್ತಗಳನ್ನು ಬಾಡಿಗೆ ನೀಡಿದ್ದರು. ಕಳೆದ 12 ವರ್ಷಗಳಿಂದ ಶ್ರೀಕಾಂತ್ ಚೌಹ್ವಾಣ್ ಸೇರಿದ ಭವಾನಿ ಲಿಕ್ಕರ್ ಶಾಪ್ ಇದೇ ಕಟ್ಟಡದಲ್ಲಿ ನಡೆಯುತ್ತಿತ್ತು. ಇತ್ತಿಚೆಗೆ ಪ್ರತಿವರ್ಷ ಭವಾನಿ ಲಿಕ್ಕರ್ ಶಾಪ್ ರಿನಿವಲ್ ಮಾಡುವಾಗ ಬಿಲ್ಡಿಂಗ್ ಮಾಲೀಕರನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ,
ಅದಲ್ಲದೆ ರುದ್ರೋಜಿರಾವ್ ಸಹಿ ನಕಲು ಮಾಡಿ ಭವಾನಿ ಬಾರ್ ಲಿಕ್ಕರ್ ಶಾಪ್ ಅದೇ ಬಿಲ್ಡಿಂಗ್ ನಲ್ಲಿ ರಿನಿವಲ್ ಆಗುತ್ತಿತ್ತು. ಬೋಗಸ್ ಸಹಿ ಪಡೆದು ರಿನಿವಲ್ ಮಾಡುತ್ತಿರುವುದನ್ನು ರುದ್ರೋಜಿರಾವ್ ಪ್ರಶ್ನಿಸಿದ್ದಾರೆ. ಜೊತೆಗೆ ಶ್ರೀಕಾಂತ್ ಚೌಹ್ವಾಣ್ ಮೇಲೆ ಜಿಲ್ಲಾಧಿಕಾರಿ ಸೇರಿದಂತೆ ಅಬಕಾರಿ ಆಯುಕ್ತರಿಗೆ ದೂರು ನೀಡಿದ್ದಾರೆ. ಇದರಿಂದ ಕೆರಳಿದ ಶ್ರೀಕಾಂತ್ ಚೌಹ್ವಾಣ್ ತಮ್ಮ ಬೆಂಬಲಿಗರ ಪಡೆಯನ್ನು ಕಟ್ಟಿಕೊಂಡು ಕಗತೂರು ಕ್ರಾಸ್ ನಲ್ಲಿ ಹೋಟೆಲ್ ನಡೆಸುತ್ತಿದ್ದ ಸ್ಥಳಕ್ಕೆ 50 ಕ್ಕು ಹೆಚ್ವು ಜನ ನುಗ್ಗಿ ದಾಂಧಲೆ ನಡೆಸಿದ್ದಾರೆ. ನಂತರ ಆಸ್ಪತ್ರೆಗೆ ತೆರಳಿದ ಸಂದರ್ಭದಲ್ಲಿ ಪೊಲೀಸರ ಮುಂದೆಯೇ ರುದ್ರೋಜಿರಾವ್ ಮೇಲೆ ಹಲ್ಲೆ ಮಾಡಿದ್ದಾರೆ.
ಈ ಬಗ್ಗೆ ಶ್ರೀಕಾಂತ್ ಚೌಹ್ವಾಣ್ ಸಹಚರರ ಮೇಲೆ ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಲಾಗಿದ್ದು, ರುದ್ರೋಜಿರಾವ್ ಹಾಗು ಕುಟುಂಬ ಸದಸ್ಯರು ಶಿವಮೊಗ್ಗ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನೂ ಪೊಲೀಸ್ ಮುಂದೆ ಹಲ್ಲೆ ನಡೆದ್ರು ಯಾವ ಕ್ರಮ ಕೈಗೊಳ್ಳದೇ ಅಸಹಾಯಕತೆ ವ್ಯಕ್ತಪಡಿಸಿದೇ ಕಾಂಗ್ರೆಸ್ ಕಾರ್ಪೊರೇಟರ್ ಗೂಂಡಾ ವರ್ತನೆಗೆ ಬೆದರಿದ್ದಾರೆ. ಕಾಂಗ್ರೆಸ್ ಕಾರ್ಪೊರೇಟರ್ ನ ದಬ್ಬಾಳಿಕೆಗೆ ಯಾವುದೇ ಕ್ರಮ ಇಲ್ವಾ.. ? ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.