ಮೈಸೂರು:- ಆರ್‌ಎಸ್‌ಎಸ್ ಅನ್ನು ಬ್ಯಾನ್ ಮಾಡಬೇಕು ಎಂಬ ಪ್ರಿಯಾಂಕ್ ಖರ್ಗೆ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಸಂಸದ ಪ್ರತಾಪ್ ಸಿಂಹ ಪ್ರತಿಕ್ರಿಯೆ ನೀಡಿದ್ದಾರೆ.
ಈ ಸಂಬಂಧ ನಗರದಲ್ಲಿ ಮಾತನಾಡಿದ ಅವರು, ಸದನದ ಒಳಗೆ ನೀವು ಪೈಲ್ಸ್ ಪ್ರಿಯಾಂಕ, ಸದನದ ಹೊರಗೆ ನೀವು ಕೂಗು ಮಾರಿ ಖರ್ಗೆ ಎಂದು ವ್ಯಂಗ್ಯವಾಡಿದ್ದಾರೆ.
ಆರ್‌ಎಸ್‌ಎಸ್ ಬ್ಯಾನ್ ಮಾಡ್ತೀರಾ? ನೀವು ಯಾರ ಮಗ ಎಂದು ಹೆಸರು ಇಟ್ಕೊಂಡಿದ್ದರಲ್ಲ ಅವರ ಕೈಯಲ್ಲೇ ಆಗಿಲ್ಲ. ಅವರು ಬ್ಯಾನ್ ಮಾಡಿದ್ರು, ಬಳಿಕ ಅಧಿಕಾರ ಕಳೆದುಕೊಂಡರು. ನೆಹರೂ ಕೂಡ ಬ್ಯಾನ್ ಮಾಡಿ ನಂತರ ಬ್ಯಾನ್ ವಾಪಸ್ ತೆಗೆದುಕೊಳ್ಳುವ ಅನಿವಾರ್ಯತೆ ಬಂತು. ನೆಹರೂ ಅವರ ಮರಿಮಗಳ ಹೆಸರು ಇಟ್ಕೊಂಡು ಏನು ಮಾಡಲು ಸಾಧ್ಯವಿಲ್ಲ. ಹೆಸರಿನಲ್ಲೂ ಸ್ವಂತಂತೆ ಇಲ್ಲ. ವ್ಯಕ್ತಿತ್ವದಲ್ಲೂ ಸ್ವಂತತೆ ಇಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
ಐಟಿಬಿಟಿ ಸಚಿವರಾಗಿ ನಿಮ್ಮ ಸಾಧನೆ ಹೇಳಿ. ಬೇರೆ ರಾಜ್ಯಗಳಿಗೆ ಕಂಪನಿಗಳು ಯಾಕೆ ಹೋಗುತ್ತಿದೆ ಹೇಳಿ. ನಿಮ್ಮ ಅಪ್ಪ ದೊಡ್ಡ ದೊಡ್ಡ ನಾಯಕರನ್ನ ಬಲಿ ಕೊಟ್ಟು ನಿಮ್ಮನ್ನ ಮಂತ್ರಿ ಮಾಡಿದ್ದಾರೆ. ಇದೇ ರೀತಿ ಕೂಗು ಮಾರಿ ರೀತಿ ಮಾತನಾಡುತ್ತಿದ್ರೆ, ನಿಮಗೆ ಒಳ್ಳೆಯದು ಆಗಲ್ಲ. ನಿಮ್ಮಪ್ಪನ್ನೇ ಕಾಂಗ್ರೆಸ್ ಸಿಎಂ ಮಾಡಲಿಲ್ಲ. ಇನ್ನೂ ನಿಮ್ಮನ್ನು ಸಿಎಂ ಮಾಡುತ್ತಾ? ಆರ್‌ಎಸ್‌ಎಸ್ ಅನ್ನು ಬೈದ್ರೆ ಅಧಿಕಾರ ಸಿಗಲ್ಲ ಎಂದು ಟೀಕಿಸಿದ್ದಾರೆ.