ಆಡಳಿತ ನಡೆಸುವಲ್ಲಿ ಕಾಂಗ್ರೆಸ್ ವಿಫಲ: ಸಂಕನೂರು ಆರೋಪ

0
sankanur
Spread the love

ವಿಜಯಸಾಕ್ಷಿ ಸುದ್ದಿ, ಗದಗ : ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ವಿಧಾನ ಪರಿಷತ್ ಸದಸ್ಯರಿಗೆ ಪ್ರಥಮ ಬಾರಿಗೆ ನೂತನವಾಗಿ ಜವಾಬ್ದಾರಿ ನೀಡಿದ್ದಾರೆ. ಹತ್ತು ತಂಡಗಳನ್ನಾಗಿ ಮಾಡಿ ತಲಾ ಒಂದೊಂದು ತಂಡಗಳು ನಾಲ್ಕು ಜಿಲ್ಲೆಯಲ್ಲಿ ಪ್ರವಾಸ ಮಾಡಿ, ಪ್ರವಾಸದ ಸಂದರ್ಭದಲ್ಲಿ ಬೇರೆ ಬೇರೆ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ರೈತರಿಗೆ, ಶಿಕ್ಷಕರಿಗೆ ಹಾಗೂ ಎಲ್ಲ ವರ್ಗದವರನ್ನು ಭೇಟಿಯಾಗಿ ಕಳೆದ ಹತ್ತು ವರ್ಷಗಳ ಅವಧಿಯಲ್ಲಿ ನರೇಂದ್ರ ಮೋದಿ ಅವರು ನೀಡಿದ ಜನಪರ ಕಾರ್ಯಕ್ರಮಗಳ ಬಗ್ಗೆ ತಿಳಿಸುವುದರ ಜೊತೆಗೆ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರದ ವೈಫಲ್ಯಗಳ ಬಗ್ಗೆ ತಿಳುವಳಿಕೆ ನೀಡುವುದು ನಮ್ಮ ಉದ್ದೇಶವಾಗಿದೆ ಎಂದು ವಿ.ಪ ಸದಸ್ಯ ಎಸ್.ವಿ. ಸಂಕನೂರ ಹೇಳಿದರು.

Advertisement

ನಗರದಲ್ಲಿ ಶನಿವಾರ ಮಧ್ಯಾಹ್ನ 12 ಗಂಟೆಗೆ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಕಳೆದೊಂದು 9 ತಿಂಗಳ ಅವಧಿಯಲ್ಲಿ ಭಯಾನಕ ಘಟನೆಗಳು ನಡೆದಿವೆ. ರಾಜ್ಯದಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದ ಸರಕಾರ ಆಡಳಿತ ನಡೆಸುವಲ್ಲಿ ವಿಫಲವಾಗಿದೆ. ಜನರ ವಿಶ್ವಾಸ ಕಳೆದುಕೊಂಡಿದೆ ಎಂದರು.

ಪ್ರಥಮವಾಗಿ ರಾಜ್ಯದಲ್ಲಿ ಬಂದಿರುವ ಭೀಕರ ಬರಗಾಲ ನಿರ್ವಹಣೆಯಲ್ಲಿ ಸರಕಾರ ಸಂಪೂರ್ಣ ವಿಫಲವಾಗಿದೆ. ಹಲವಾರು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರೈತರು ನಿರೀಕ್ಷೆ ಮಾಡಿದ ಸಾಲ ಮನ್ನಾ, ಗುಳೆ ಹೋಗುವುದನ್ನು ತಡೆಯುತ್ತಾರೆಂಬ ನಿರೀಕ್ಷೆಯಿತ್ತು. 2 ಸಾವಿರ ರೂ ಘೊಷಣೆ ಮಾಡಿದ್ದರೂ ರೈತರಿಗೆ ತಲುಪಿಲ್ಲ ಎಂದರು.

ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ ಅವರು ಇಂತಹ ಘಟನೆಗಳಕನ್ನು ಮರೆಮಾಚಲು ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ. 2004ರಿಂದ 2014ರ ವರೆಗೆ ಮನಮೋಹನಸಿಂಗ್ ಪ್ರಧಾನಿಯಾಗಿದ್ದ ಅವಧಿಯಲ್ಲಿ 81 ಸಾವಿರ ಕೋಟಿ ರೂ ನೀಡಿದ್ದರು. ನರೇಂದ್ರ ಮೋದಿ ಅಧಿಕಾರವಧಿಯಲ್ಲಿ 2014ರಿಂದ 2024ರವರೆಗೆ, 2.85 ಲಕ್ಷ ಕೋಟಿ ತೆರಿಗೆ ನೀಡಿದ್ದಾರೆ. ಇವೆಲ್ಲ ಗೊತ್ತಿದ್ದರೂ ಸಿಎಂ ಸಿದ್ದರಾಮಯ್ಯ ಸುಳ್ಳನ್ನು ಹೇಳುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ಸುಳ್ಳು ಆಪಾದನೆ ಮಾಡುತ್ತಿರುವುದನ್ನು ನಿಲ್ಲಿಸಬೇಕು ಎಂದು ಮನವಿ ಮಾಡಿದರು.

ನರೇಂದ್ರ ಮೋದಿ ಅವರು ಹತ್ತು ವರ್ಷಗಳ ಅವಧಿಯೋಳಗೆ ಬಡವರಿಗಾಗಿ ಜನಪರ ಕಾರ್ಯಕ್ರಮ ಗಳನ್ನು ನೀಡುವುದರ ಜೊತೆಗೆ ಮೂಲಸೌಕರ್ಯನ್ನು ನೀಡಿದ್ದಾರೆ. 3 ಕೋಟಿ ಮನೆ, 13 ಕೋಟಿ ಮನೆಗಳಿಗೆ ಜೆಜೆಎಂ ಮೂಲಕ ನಲ್ಲಿ ನೀರು, 9 ಕೋಟಿ ಶೌಚಾಲಯ, ಉಜ್ವಲ ಯೋಜನೆ 11 ಕೋಟಿ ಜನರಿಗೆ ಸಿಲಿಂಡರ್, ಆಯುಷ್ಯಮಾನ್ ಯೋಜನೆಗಳ ಮೂಲಕ 140 ಕೋಟಿ ಜನರ ವಿಶ್ವಾಸಕ್ಕೆ ಪಾತ್ರರಾಗಿದ್ದಾರೆ ಎಂದರು.

ಕಾಂಗ್ರೆಸ್ ಸರಕಾರ ಒಂದು ಕೈಗೆ ಪಂಚ ಗ್ಯಾರಂಟಿ ಕೊಟ್ಟು, ಹಾಲು, ಬಸ್ ದರ, ವಿದ್ಯುತ್ ಸೇರಿ ಇತರೆ ಮೂಲಸೌಲಭ್ಯಗಳ ದರವನ್ನು ಹೆಚ್ಚಿಸಿದ್ದಾರೆ. ಕನಿಷ್ಠ 370 ಲೋಕಸಭಾ ಕ್ಷೇತ್ರ ಗೆಲ್ಲುವುದರ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿದ್ದಾರೆ ಎಂದರು.

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ರಾಜು ಕುರಡಗಿ, ಎಂ.ಎಸ್. ಕರಿಗೌಡ್ರ, ಸಿದ್ದಣ್ಣ ಪಲ್ಲೇದ, ರವಿ ಶಿದ್ಲಿಂಗ್, ರಮೇಶ ಸಜ್ಜಗಾರ, ಅಶೋಕ ಕುಡತಿನಿ, ಸಂತೋಷ ಅಕ್ಕಿ ಇದ್ದರು.

ರಾಜ್ಯ ಸರ್ಕಾರಕ್ಕೆ ಕಾನೂನು ಸುವ್ಯವಸ್ಥೆ ಕಾಪಾಡಲು ಸಾಧ್ಯವಾಗಲಿಲ್ಲ. ಬೆಳಗಾವಿ, ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನಲ್ಲಿ ನಡೆದ ಪ್ರಕರಣಗಳೂ ಸೇರಿ ಅನೇಕ ಪ್ರಕರಣಗಳು ನಡೆದಿವೆ. ಕಾಂಗ್ರೆಸ್ ಸರಕಾರದಲ್ಲಿ ಮಹಿಳೆಯರಿಗೆ ರಕ್ಷಣೆ ಇಲ್ಲದಂತಾಗಿದೆ. ವಿಧಾನಸೌಧಲ್ಲಿ ರಾಜ್ಯಸಭೆ ಸದಸ್ಯರಾಗಿ ಆಯ್ಕೆಯಾದ ನಾಸೀರಹುಸೇನ ಬೆಂಬಕಿಗರು ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ. ಕರಸೇವರಕರನ್ನು ಬಂಧಿಸುವುದು, ದೇಶದ್ರೋಹಿಗಳನ್ನು ಬೆಂಬಲಿಸುವುದು ನಡೆದಿದೆ.
– ಎಸ್.ವಿ. ಸಂಕನೂರ.
ವಿ.ಪ ಸದಸ್ಯರು.

ವಿ.ಪ ಸದಸ್ಯ ಕೆ.ಎಸ್. ನವೀನ ಮಾತನಾಡಿ, ರಾಜ್ಯ ತೀವ್ರ ಬರಗಾಲ ಎದುರಿಸುತ್ತಿದ್ದು, ಕುಡಿಯುವ ನೀರಿಗೆ ಹಾಹಾಕಾರವೆದ್ದಿದೆ. ಗ್ರಾಮ, ಪಟ್ಟಣದ ಹಾಗೂ ನಗರಗಳಲ್ಲಿ ಕುಡಿಯುವ ನೀರಿನ ಸಮರ್ಪಕ ಪೂರೈಕೆಯಾಗುತ್ತಿಲ್ಲ. ಎಲ್ಲ ಕಡೆಗಳಲ್ಲಿ ನೀರಿನ ಟ್ಯಾಂಕರ್ ಮಾಫಿಯಾ ಆರಂಭವಾಗಿದೆ. ಇದು ಬಡವರ ಮೇಲೆ ಹೊರೆಯಾಗುತ್ತಿದೆ. ಈ ಸಂದರ್ಭದಲ್ಲಿ ರಾಜಕಾರಣ ಮಾಡುವುದನ್ನು ಬಿಟ್ಟು ಜನರ ಸಂಕಷ್ಟಕ್ಕೆ ಕೈ ಹಿಡಿಯುವ ಕೆಲಸಮಾಡಿ ಎಂದು ಹೇಳಿದರು.


Spread the love

LEAVE A REPLY

Please enter your comment!
Please enter your name here