HomeKarnataka Newsಪರಿಶಿಷ್ಟ ಜಾತಿ, ವರ್ಗಗಳನ್ನು ಸಂಪೂರ್ಣವಾಗಿ ತುಳಿದ ಕಾಂಗ್ರೆಸ್ ಸರ್ಕಾರ: ಛಲವಾದಿ ನಾರಾಯಣಸ್ವಾಮಿ

ಪರಿಶಿಷ್ಟ ಜಾತಿ, ವರ್ಗಗಳನ್ನು ಸಂಪೂರ್ಣವಾಗಿ ತುಳಿದ ಕಾಂಗ್ರೆಸ್ ಸರ್ಕಾರ: ಛಲವಾದಿ ನಾರಾಯಣಸ್ವಾಮಿ

For Dai;y Updates Join Our whatsapp Group

Spread the love

ಬೆಂಗಳೂರು: ಕಾಂಗ್ರೆಸ್ ಸರ್ಕಾರ ಎಸ್.ಸಿ.ಎಸ್.ಪಿ ಮತ್ತು ಟಿ.ಎಸ್.ಪಿ ದಲಿತರ ಹಣವನ್ನು ಬೇರೆ ಬೇರೆ ಕಾರಣಗಳಿಗೆ ದುರುಪಯೋಗ ಮಾಡಿ ಪರಿಶಿಷ್ಟ ಜಾತಿ ವರ್ಗಗಳನ್ನು ಸಂಪೂರ್ಣವಾಗಿ ತುಳಿದಿದೆ, ವಂಚನೆ ಮಾಡಿದೆ ಮತ್ತು ಮೋಸ ಮಾಡಿದೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಆರೋಪಿಸಿದ್ದಾರೆ.

ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಸ್.ಸಿ.ಎಸ್.ಪಿ ಮತ್ತು ಟಿ.ಎಸ್.ಪಿ ಹಣ 42 ಸಾವಿರ ಕೋಟಿ ರೂಪಾಯಿಗಳನ್ನು ದಲಿತರಿಗಾಗಿ ಇಟ್ಟಿದ್ದೇವೆ ಎಂದು ಹೇಳಿದ್ದು, ಅದರಲ್ಲಿ 21 ಸಾವಿರ ಕೋಟಿ ಮೊತ್ತ ಎಲ್ಲ ಇಲಾಖೆಗಳಿಗೆ ಹಂಚಿಕೆಯಾಗಿದೆ. ಉಳಿದ 21 ಸಾವಿರ ಕೋಟಿಯಲ್ಲಿ 14 ಸಾವಿರ ಕೋಟಿಯನ್ನು ಗ್ಯಾರಂಟಿಗಳಿಗೆ ಬಳಕೆ ಮಾಡಿಕೊಂಡು ದಲಿತರನ್ನು ವಂಚಿಸಿದ್ದಾರೆ ಎಂದು ದೂರಿದರು.

ಉಳಿದ ದಲಿತರ ಹಣ 7 ಸಾವಿರ ಕೋಟಿಯನ್ನು ಸಮಾಜ ಕಲ್ಯಾಣ ಇಲಾಖೆಗೆ ಕೊಟ್ಟು ಅದರಲ್ಲೂ ಪ್ರಜಾಪ್ರಭುತ್ವ ದಿನಾಚರಣೆಗಾಗಿ ಹಣ, ಸಂವಿಧಾನ ದಿನಾಚರಣೆಗಾಗಿ ಹಣ. ಅಷ್ಟೇ ಅಲ್ಲದೆ ನಾಗಮೋಹನ್ ದಾಸ್ ಆಯೋಗಕ್ಕೂ ಎಸ್.ಸಿ.ಎಸ್.ಪಿ ಮತ್ತು ಟಿ.ಎಸ್.ಪಿ ಹಣ- ಹೀಗೆ ದಲಿತರ ಹಣವನ್ನು ಬೇರೆ ಬೇರೆ ಕಾರಣಗಳಿಗೆ ದುರುಪಯೋಗ ಮಾಡಿದೆ ಎಂದು ಆರೋಪಿಸಿದರು.

ಪರಿಶಿಷ್ಠ ಜಾತಿ ವರ್ಗಗಳಿಗೆ ಸಮಾಜ ಕಲ್ಯಾಣ ಇಲಾಖೆಯಲ್ಲಿ ಯಾವ ಸವಲತ್ತುಗಳು ಸಿಗಬೇಕಾಗಿತ್ತೋ ಈ ವಿಚಾರದಲ್ಲಿ ಅನೇಕ ನ್ಯೂನತೆÉಗಳು ಇತ್ತೀಚೆಗೆ ಕಂಡುಬರುತ್ತಿದೆ ಎಂದು ದೂರಿದರು. ಪರಿಶಿಷ್ಟ ಜಾತಿ ವರ್ಗಗಳ ವಿದ್ಯಾರ್ಥಿಗಳ ಶಾಲಾ ಮತ್ತು ಕಾಲೇಜಿನ ಶುಲ್ಕವನ್ನು ಸರ್ಕಾರವೇ ಭರಿಸುತ್ತಿತ್ತು. ಪ್ರಸ್ತುತ ಮೊದಲು ನೀವು ಶಾಲಾ ಮತ್ತು ಕಾಲೇಜಿನ ಶುಲ್ಕವನ್ನು ಕಟ್ಟಿದ ನಂತರ ನಾವು ಮರುಪಾವತಿ ಮಾಡುವ ಪದ್ಧÀ್ದತಿಗೆ ಬಂದಿದ್ದಾರೆ ಎಂದು ಆಕ್ಷೇಪಿಸಿದರು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!