ಕಾಂಗ್ರೆಸ್ ಸರ್ಕಾರ ಆಶ್ವಾಸನೆಗಳನ್ನು ಈಡೇರಿಸಿದೆ:ಸುಜಾತಾ ದೊಡ್ಡಮನಿ

0
sujata
Spread the love

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಪಕ್ಷ ಎಲ್ಲ ವರ್ಗದ ಜನರಿಗೆ, ಸಾಮಾನ್ಯರಿಗೂ ಆದ್ಯತೆ ನೀಡುವ ಮೂಲಕ ಸರ್ವರನ್ನು ಸಮಾನತೆಯಿಂದ ಕಾಣುತ್ತಿದೆ.

Advertisement

ಶ್ರೀಮಂತರಿಗೆ ಮಾತ್ರ ಅನುಕೂಲ ಕಲ್ಪಿಸುವದು ಕಾಂಗ್ರೆಸ್ ಪಕ್ಷದ ಸಿದ್ಧಾಂತವಲ್ಲ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಸುಜಾತಾ ದೊಡ್ಡಮನಿ ಪ್ರತಿಪಾದಿಸಿದರು.

ಅವರು ಸಮೀಪದ ಶಿಗ್ಲಿ ಗ್ರಾಮದಲ್ಲಿ ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಅವರ ಪರ ಚುನಾವಣೆ ಪ್ರಚಾರ ಸಭೆಯಲ್ಲಿ ಮಾತನಾಡಿದರು.

ಕಾಂಗ್ರೆಸ್ ಎಲ್ಲ ವರ್ಗಗಳ ಅಭಿವೃದ್ಧಿಗಾಗಿ ಈವರೆಗೆ ಹತ್ತಾರು ಯೋಜನೆಗಳನ್ನು ಜಾರಿಗೆ ತಂದಿದೆ. ರಾಜ್ಯದಲ್ಲಿನ ಸಿ.ಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ ನೇತೃತ್ವದಲ್ಲಿ ಸರಕಾರ ಮತದಾರರಿಗೆ ನೀಡಿದ ಆಶ್ವಾಸನೆಗಳನ್ನು ಈಡೇರಿಸಿ ನುಡಿದಂತೆ ನಡೆದಿದ್ದು, ಗ್ಯಾರಂಟಿ ಯೋಜನೆಗಳು ಸಾಕಷ್ಟು ಕುಟುಂಬಗಳಿಗೆ ಅನೂಕೂಲವಾಗಿವೆ ಎಂದರು.

ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಮಾತನಾಡಿ, ಪಕ್ಷದ ಹಿರಿಯ ಮುಖಂಡರ, ಎಲ್ಲ ಕಾರ್ಯಕರ್ತರ ಆಶೀರ್ವಾದದಿಂದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಲೋಕಸಭೆಗೆ ಸ್ಪರ್ಧಿಸುತ್ತಿದ್ದೇನೆ.

ಪಕ್ಷದ ಗೆಲುವಿಗಾಗಿ ಹಿರಿಯರ ಮಾರ್ಗದರ್ಶನದಲ್ಲಿ ಯುವಕರು ಹಗಲಿರುಳು ಕೆಲಸ ಮಾಡುತ್ತಿದ್ದಾರೆ. ನೀವು ನೀಡುವ ಒಂದೊಂದು ಮತವೂ ವ್ಯರ್ಥವಾಗದಂತೆ ಕೆಲಸ ಮಾಡಿ ನಿಮ್ಮ ಋಣ ತೀರಿಸುತ್ತೇನೆ ಎಂದು ನುಡಿದರು.

ಸಭೆಯ ಅಧ್ಯಕ್ಷತೆಯನ್ನ ದುಂಡವ್ವ ಹಾದಿಮನಿ ವಹಿಸಿದ್ದರು. ವೇದಿಕೆಯಲ್ಲಿ ಮಾಜಿ ಶಾಸಕರಾದ ಜಿ.ಎಸ್. ಗಡ್ಡದೇವರಮಠ, ರಾಮಣ್ಣ ಲಮಾಣಿ, ರಾಮಕೃಷ್ಣ ದೊಡ್ಡಮನಿ, ಹಿರಿಯ ಮುಖಂಡರಾದ ಎಸ್.ಪಿ. ಬಳಿಗಾರ, ಹುಮಾಯೂನ ಮಾಗಡಿ, ಡಿ.ಕೆ. ಹೊನ್ನಪ್ಪನವರ, ಜಿ.ಆರ್. ಕೊಪ್ಪದ, ರಾಜರತ್ನ ಹುಲಗೂರ, ರಾಮಣ್ಣ ಲಮಾಣಿ(ಶಿಗ್ಲಿ), ವಿ.ಜಿ. ಪಡಗೇರಿ, ರಾಜು ಮಡಿವಾಳರ, ಸೋಮಣ್ಣ ಬೆಟಗೇರಿ, ಕೋಟೆಪ್ಪ ವರ್ದಿ, ಯಲ್ಲಪ್ಪ ತಳವಾರ, ಬಸವರಡ್ಡಿ ಹನುಮರಡ್ಡಿ, ದೇವರರಾಜ ತೋಟದ, ಸಿದ್ರಾಮಣ್ಣ ಗುಂಜಳ, ರಫೀಕ ಕಲಬುರ್ಗಿ, ರಮೇಶ ಬಾಕಿ, ಶಿವಪ್ಪ ಕುರಿತು, ಭಾಗ್ಯಶ್ರೀ ಬಾಬಣ್ಣ, ಸುರೇಶ ಸ್ವಾದಿ, ಸಿದ್ದು ಸ್ವಾಮಿ, ಬಾಬುಸಾಬ ಸುಂಕದ, ರಾಜು ಓಲೇಕಾರ, ಸಂತೋಷ ತಾಂದಳೆ ಸೇರಿದಂತೆ ಅನೇಕರಿದ್ದರು.

ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ರೈತರ ಸಂಪೂರ್ಣ ಸಾಲ ಮನ್ನಾ ಮಾಡುವದಾಗಿ ಗ್ಯಾರಂಟಿ ನೀಡಿದೆ. ಅಲ್ಲದೆ, ಮನೆಯ ಯಜಮಾನಿಗೆ ವರ್ಷಕ್ಕೆ 1 ಲಕ್ಷ ರೂ.ಗಳ ಮಹಾಲಕ್ಷ್ಮಿ ಯೋಜನೆ ಸೇರಿದಂತೆ ಅನೇಕ ಗ್ಯಾರಂಟಿಗಳನ್ನು ನೀಡಿದೆ. ಇವುಗಳನ್ನು ಹೇಳಿಕೆ ಕೊಡುವದಲ್ಲ, ರಾಜ್ಯ ಸರಕಾರ ಮಾಡಿದಂತೆ ನೀಡಿದ ಗ್ಯಾರಂಟಿಗಳನ್ನು ಈಡೇರಿಸುವದು ಕಾಂಗ್ರೆಸ್ ಸಿದ್ಧಾಂತವಾಗಿದೆ ಎಂದರಲ್ಲದೆ, ಎಲ್ಲರೂ ಈ ಬಾರಿ ಆಶೀರ್ವಾದ ಮಾಡಿ ಎಂದು ಆನಂದಸ್ವಾಮಿ ಗಡ್ಡದೇವರಮಠ ಮನವಿ ಮಾಡಿದರು.


Spread the love

LEAVE A REPLY

Please enter your comment!
Please enter your name here