ಬೆಂಗಳೂರು: IPL ಪಂದ್ಯದಲ್ಲಿ ಬ್ಯಾಟಿಂಗ್ ಮಾಡಿದಂತೆ ಕಾಂಗ್ರೆಸ್ ಸರ್ಕಾರ ಬೆಲೆ ಏರಿಕೆ ಮಾಡುತ್ತಿದೆ ಎಂದು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಈ ಕುರಿತು ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಅವರು, ಐಪಿಎಲ್ ಪಂದ್ಯದಲ್ಲಿ ಬ್ಯಾಟಿಂಗ್ ಮಾಡಿದಂತೆ ಕಾಂಗ್ರೆಸ್ ಸರ್ಕಾರ ಬೆಲೆ ಏರಿಕೆ ಮಾಡುತ್ತಿದೆ.
Advertisement
ರಾಜ್ಯ ಸರ್ಕಾರ ಲಿಫ್ಟ್‌ಗಳು, ಟ್ರಾನ್ಸ್‌ಫಾರ್ಮರ್‌ಗಳು ಮತ್ತು ಜನರೇಟರ್‌ಗಳ ತಪಾಸಣೆ ಮತ್ತು ನವೀಕರಣ ವೆಚ್ಚವನ್ನು ಹೆಚ್ಚಿಸಿದೆ. ಕರ್ನಾಟಕ ಕಾಂಗ್ರೆಸ್ ತನ್ನ 24/7 ಎಕ್ಸ್ಕ್ಲೂಸಿವ್ ಬೆಲೆ ಏರಿಕೆ ಅಭಿಯಾನದೊಂದಿಗೆ ಕನ್ನಡಿಗರ ಜೇಬನ್ನು ಹಾಲಿನ ಪ್ಯಾಕೆಟ್‌ಗಳಿಗಿಂತ ವೇಗವಾಗಿ ಖಾಲಿ ಮಾಡುತ್ತಿದೆ ಎಂದು ಬರೆದುಕೊಂಡಿದ್ದಾರೆ.