ಕಾಂಗ್ರೆಸ್ ಸರ್ಕಾರ ಸುಮ್ಮನೇ ಪೊಲೀಸರನ್ನೇ ಟಾರ್ಗೆಟ್ ಮಾಡ್ತಿದೆ: ಪ್ರತಾಪ್ ಸಿಂಹ ಕಿಡಿ

0
Spread the love

ಬೆಂಗಳೂರು: ಕಾಂಗ್ರೆಸ್ ಸರ್ಕಾರ ಸುಮ್ಮನೇ ಪೊಲೀಸರನ್ನೇ ಟಾರ್ಗೆಟ್ ಮಾಡ್ತಿದೆ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಆರೋಪಿಸಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಸರ್ಕಾರ ತಮ್ಮ ತಪ್ಪು ಮುಚ್ಚಿಕೊಳ್ಳಲು ಪೊಲೀಸರನ್ನು ಎಲ್ಲ ರೀತಿಯಲ್ಲಿ ಸಂಕಷ್ಟಕ್ಕೆ ಸಿಕ್ಕಿಸಿದೆ.

Advertisement

ಪೊಲೀಸರನ್ನು ಈ ಸರ್ಕಾರ ಟಾರ್ಗೆಟ್ ಮಾಡಿದೆ. ಸಿದ್ದರಾಮಯ್ಯ ನೈತಿಕತೆ ಹೊಣೆ ಹೊರಬೇಕು. ಪೊಲೀಸರ ಆತ್ಮಸ್ಥೈರ್ಯ ಕುಂದಿಸುವ ಕೆಲಸ ಇದು ಎಂದು ಕಿಡಿ ಕಾರಿದ್ದಾರೆ. ನಿಮ್ಮ ಹಾರಾಟಕ್ಕಾಗಿ 11 ಸಾವಾಯ್ತು, ಕೇವಲ ನಿಮ್ಮ ನಿಮ್ಮ ಮಕ್ಕಳಿಗಾಗಿ ಈ ಕಾರ್ಯಕ್ರಮ ಮಾಡಿದ್ರಿ. ಪೊಲೀಸ್ ಇಲಾಖೆ ಜತೆ ಸಭೆ ನಡೆಸಿ ಸರ್ಕಾರ ಈ ಕಾರ್ಯಕ್ರಮ ಮಾಡಿಲ್ಲ.

ನೀವ್ಯಾಕೆ ನೈತಿಕ ಹೊಣೆ ಹೊತ್ತಿಲ್ಲ. ಮ್ಯಾಚ್ ಆದ ದಿನ ರಾತ್ರಿಯೆಲ್ಲ ಅಭಿಮಾನಿಗಳು ಬೆಂಗಳೂರಿನಲ್ಲಿ ಇದ್ರು. ರಾತ್ರಿ ಎಲ್ಲಾ ಪೊಲೀಸರು ಇಡೀ ನಗರದಲ್ಲಿ ಸುವ್ಯವಸ್ಥೆ ಕಾಪಾಡಿದ್ರು ಅವರಿಗೆ ಸರ್ಕಾರ ಮೆಚ್ಚುಗೆ ಸೂಚಿಸಬೇಕಿತ್ತು. ಆ ರಾತ್ರಿ ಯಾವುದೇ ಅವಘಡ ಆಗದೇ ಪೊಲೀಸರು ನಿಯಂತ್ರಣ ಮಾಡಿದ್ದಾರೆ ಅದಕ್ಕೆ ಯಾಕೆ ಮೆಚ್ಚುಗೆ ಸೂಚಿಸಿಲ್ಲ.

ಬೆಳಗ್ಗೆ ನೀವು ಎದ್ದು ಟ್ವೀಟ್ ಮಾಡಿ ಬನ್ನಿ ಸೆಲೆಬ್ರೆಷನ್ ಇದೆ ಅಂತ ಓಪನ್ ಆಹ್ವಾನ ಮಾಡ್ತೀರಿ, ಪೊಲೀಸ್ ಕಮೀಷನರ್ ಜತೆ ಮಾತಾಡಿದ್ರಾ?. ಇದು ಇಂಟಲಿಜೆನ್ಸ್ ಫೇಲ್ಯೂರ್ ಅಲ್ವಾ?. ಯಾಕೆ ಇಂಟಲಿಜೆನ್ಸ್ ಮುಖ್ಯಸ್ಥರ ವಿರುದ್ಧ ಕ್ರಮ ತಗೊಂಡಿಲ್ಲ? ಹೀಗೆ ಸಾಲು ಸಾಲು ಪ್ರಶ್ನೆ ಮಾಡಿ ಕಾಂಗ್ರೆಸ್​​ ವಿರುದ್ಧ ಕಿಡಿಕಾರಿದ್ದಾರೆ.


Spread the love

LEAVE A REPLY

Please enter your comment!
Please enter your name here