ಕೋಲಾರ: ಮತ ಬ್ಯಾಂಕ್ʼಗಾಗಿ ಕಾಂಗ್ರೆಸ್ ಸರ್ಕಾರ ಹಿಂದೂ ವಿರೋಧಿ ಧೋರಣೆ ತೋರುತ್ತಿದೆ ಎಂದು ಮಾಜಿ ಸಂಸದ ಎಸ್ ಮುನಿಸ್ವಾಮಿ ಹೇಳಿದ್ದಾರೆ.
ನಗರದ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರ ರೈತರ ಜಮೀನುಗಳನ್ನು ಕಬಳಿಸುವ ಷಡ್ಯಂತ್ರ ಮಾಡುತ್ತಿದೆ. ಪಾಕಿಸ್ತಾನದ ಏಜೆಂಟರ್ ಆಗಿರುವ ಸಚಿವ ಜಮೀರ್ ಅಹಮ್ಮದ್ ಗೆ ಸಿಎಂ ಸಿದ್ದರಾಮಯ್ಯ ಕುಮ್ಮಕ್ಕು ನೀಡುತ್ತಿದ್ದಾರೆ,
ಕೇವಲ ಒಂದು ಸಮುದಾಯವನ್ನು ಮತ ಬ್ಯಾಂಕ್ ಗಾಗಿ ಒಲಿಸಿಕೊಳ್ಳಲು ಕಾಂಗ್ರೆಸ್ ಸರ್ಕಾರ ಹಿಂದೂ ವಿರೋಧಿ ಧೋರಣೆ ತೋರುತ್ತಿದೆ. ರಾತ್ರೋರಾತ್ರಿ ರೈತರ ಜಮೀನುಗಳಲ್ಲಿ ಕಾಲಂ ನಂಬರ್ 11ರಲ್ಲಿ ವಕ್ಫ್ ಬೋರ್ಡ್ ಅಂತ ಸೇರಿಸಿದ್ದೀರಿ ಅದನ್ನು ಮೊದಲು ತೆಗೆಯಿರಿ ಎಂದು ಕಿಡಿಕಾರಿದರು.
ಹಿಂದೂಗಳ ಸ್ಮಶಾನ ಜಾಗ, ರೈತರ ಜಾಗ, ವಂಶಪಾರಂಪರ್ಯವಾಗಿ ಬಂದ ಜಮೀನುಗಳನ್ನು ರಾತ್ರೋರಾತ್ರಿ ಖಾತೆ ಬದಲಾವಣೆ ಮಾಡಿದ್ದಾರೆ. ಇದರಿಂದ ಕಾಂಗ್ರೆಸ್ ಪಕ್ಷದವರ ಅಸಲಿ ಬಣ್ಣ ಈಗ ಎಲ್ಲರಿಗೂ ಗೊತ್ತಾಗುತ್ತಿದೆ ಎಂದರು.



