ಹುಬ್ಬಳ್ಳಿ:- ಧಾರ್ಮಿಕ ಕ್ಷೇತ್ರಗಳ ವಿಚಾರದಲ್ಲಿ ಕಾಂಗ್ರೆಸ್ ರಾಜಕೀಯ ಯಾತ್ರೆ ಮಾಡುತ್ತಾ ಬಂದಿದೆ ಎಂದು ಹೇಳುವ ಮೂಲಕ ಅರವಿಂದ ಬೆಲ್ಲದ್ ಆಕ್ರೋಶ ಹೊರ ಹಾಕಿದ್ದಾರೆ.
Advertisement
ಈ ಸಂಬಂಧ ನಗರದಲ್ಲಿ ಮಾತನಾಡಿದ ಅವರು, ಬಿಜೆಪಿಯ ಧರ್ಮಸ್ಥಳ ಯಾತ್ರೆ ರಾಜಕಾರಣ ಯಾತ್ರೆ ಎಂಬ ಡಿಕೆಶಿ ಹೇಳಿಕೆಗೆ ತಿರುಗೇಟು ನೀಡಿದ್ದಾರೆ. ಬಿಜೆಪಿಯವರು ಯಾವುದೇ ರೀತಿಯ ರಾಜಕೀಯ ಯಾತ್ರೆ ಮಾಡಿಲ್ಲ. ಹಿಂದು ಧಾರ್ಮಿಕ ಸಂಸ್ಥೆಗಳ ಮೇಲೆ ಷಡ್ಯಂತ್ರ ಮಾಡಿದ್ದಾರೆ. ಈಗ ಷಡ್ಯಂತ್ರ ಕುರಿತು ಸ್ವತಃ ಕಾಂಗ್ರೆಸ್ ನವರೇ ಒಪ್ಪಿದ್ದಾರೆ. ಡಿಸಿಎಂ ಶಿವಕುಮಾರ್ ಷಡ್ಯಂತ್ರ ನಡೆದಿದೆ ಅಂತಾ ಹೇಳಿದ್ದಾರೆ. ಷಡ್ಯಂತ್ರ ನೋಡಿಕೊಂಡು ನಾವು ಸುಮ್ಮನೆ ಕುಳಿತುಕೊಳ್ಳಲ ಆಗಲ್ಲ. ಶ್ರದ್ಧಾ ಕೇಂದ್ರ ವಿರುದ್ಧ ನಡೆದ ಷಡ್ಯಂತ್ರ ಬಹಿರಂಗ ಆಗಬೇಕು ಇದೊಂದು ಧಾರ್ಮಿಕ ಕೇಂದ್ರ ಮೇಲೆ ನಡೆದ ಗದಪ್ರಹಾರ ಮಾಡುವ ಹೋರಾಟ ವರೆತೂ ಯಾವುದೇ ರೀತಿಯ ರಾಜಕೀಯ ಅಲ್ಲ ಎಂದರು.