ಹುಬ್ಬಳ್ಳಿ: ದಲಿತರಲ್ಲೇ ರೈಟು, ಲೆಫ್ಟ್ ಅಂತ ಕಾಂಗ್ರೆಸ್ ಗೊಂದಲ ಸೃಷ್ಟಿ ಮಾಡಿದೆ ಎಂದು ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸುಳ್ಳು ಹೇಳುವ ಫ್ಯಾಕ್ಟರಿ ಓಪನ್ ಮಾಡಿದ್ದೇವೆ. ಅಂಬೇಡ್ಕರ್ ಪ್ರಶಸ್ತಿ ವಿಚಾರದಲ್ಲಿ ಗೊಂದಲ ಸೃಷ್ಟಿ ಮಾಡಿದೆ.
ದಲಿತರಲ್ಲೇ ರೈಟು, ಲೆಫ್ಟ್ ಅಂತ ಕಾಂಗ್ರೆಸ್ ಗೊಂದಲ ಸೃಷ್ಟಿ ಮಾಡಿದೆ. ಅವರಿಗೆ ಜಾಸ್ತಿ ಕೊಟ್ಟಿದ್ದೇವೆ, ಇವ್ರಿಗೆ ಜಾಸ್ತಿ ಕೊಟ್ಟಿದ್ದೇವೆ ಅಂತ ಅಸಮಾಧಾನ ಹುಟ್ಟಿಸಿದ್ದಾರೆ. ಒಕ್ಕಲೆಬ್ಬಿಸಿ ಜನರ ನಡುವೆ ಗೊಂದಲ ಸೃಷ್ಟಿ ಮಾಡಲಾಗುತ್ತಿದೆ ಎಂದು ಟೀಕಿಸಿದ್ದಾರೆ.
ಕಾಂಗ್ರೆಸ್ ದೊಡ್ಡ ಗೊಂದಲದ ಗೂಡಾಗಿದೆ. ಕಾಂಗ್ರೆಸ್ ಅಂಬೇಡ್ಕರ್ ಅವರಿಗೆ ಗೌರವದ ಬದಲು ಅಪಮಾನ ಮಾಡುತ್ತಿದೆ. ಬೆಳಗಾವಿ ಗಾಂಧೀಜಿ ಬಂದು ನೂರು ವರ್ಷವಾದ ಹಿನ್ನೆಲೆ ದೊಡ್ಡ ಕಾರ್ಯಕ್ರಮ ಮಾಡಿತು. ಆದರೆ, ಅಂಬೇಡ್ಕರ್ ಬಂದು ನೂರು ವರ್ಷವಾಗಿದೆ. ಯಾಕೆ ಕಾರ್ಯಕ್ರಮ ಮಾಡಿಲ್ಲ. ಈ ಕಾರ್ಯಕ್ರಮವನ್ನು ಬಿಜೆಪಿ ಮಾಡುತ್ತಿದೆ ಎಂದು ಹೇಳಿದ್ದಾರೆ.